ನವದೆಹಲಿ (ರಾಯಿಟರ್ಸ್): ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಅಧ್ಯಕ್ಷರಾಗಿ ಸಿದ್ಧಾರ್ಥ ಮೊಹಂತಿ ಅವರನ್ನು ಕೇಂದ್ರ ಸರ್ಕಾರ ಶುಕ್ರವಾರ ನೇಮಕ ಮಾಡಿದೆ.

ಫೈನಾನ್ಶಿಯಲ್ ಸರ್ವಿಸಸ್ ಇನ್ಸ್ಟಿಟ್ಯೂಷನ್ಸ್ ಬ್ಯೂರೊ (ಎಫ್ಎಸ್ಐಬಿ) ಮೊಹಂತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಕಳೆದ ತಿಂಗಳು ಶಿಫಾರಸು ಮಾಡಿತ್ತು.

ಎಲ್ಐಸಿ ಅಧ್ಯಕ್ಷರಾಗಿ ಎಂ.ಆರ್. ಕುಮಾರ್ ಅವರ ಅಧಿಕಾರಾವಧಿಯು ಮಾರ್ಚ್ 13ಕ್ಕೆ ಕೊನೆಗೊಂಡ ನಂತರ, ಮೊಹಂತಿ ಅವರು ಹಂಗಾಮಿ ಅಧ್ಯಕ್ಷರಾಗಿ ಸೇವೆಯಲ್ಲಿದ್ದರು. ಮೂಲಗಳ ಪ್ರಕಾರ, ಮೊಹಂತಿ ಅವರನ್ನು 2025ರ ಜೂನ್ 7ರವರೆಗೆ ಎಲ್ಐಸಿ ಮುಖ್ಯಸ್ಥರಾಗಿ ನೇಮಿಸಲಾಗಿದೆ.

ಬಿ.ಸಿ. ಪಟ್ಟನಾಯಕ್ ಅವರನ್ನು ಐಆರ್ಡಿಎಐನ ಆಜೀವ ಸದಸ್ಯರನ್ನಾಗಿ ಸರ್ಕಾರ ನೇಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.