ನವದೆಹಲಿ: 2023–24ರ ಹಣಕಾಸು ವರ್ಷದಲ್ಲಿ ಆರೋಗ್ಯ ವಿಮಾ ಕಂತಿನ ಮೇಲೆ ₹8,263 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಕೇಂದ್ರವು ಲೋಕಸಭೆಗೆ ತಿಳಿಸಿದೆ.

ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿಗೆ ವಿನಾಯಿತಿ ಅಥವಾ ದರ ಕಡಿತಗೊಳಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ಜಿಎಸ್‌ಟಿ ದರಗಳು ಮತ್ತು ವಿನಾಯಿತಿಯು ಜಿಎಸ್‌ಟಿ ಮಂಡಳಿಯ ಶಿಫಾರಸುಗಳ ಮೇಲೆ ಅವಲಂಬಿತ ಎಂದು ಹೇಳಿದರು.

ಆರೋಗ್ಯ ವಿಮಾ ಕಂತಿನಿಂದ 2022-23ರ ಆರ್ಥಿಕ ವರ್ಷದಲ್ಲಿ ₹7,638 ಕೋಟಿ, 2021–22ರಲ್ಲಿ ₹5,354 ಕೋಟಿ ಜಿಎಸ್‌ಟಿ ಸಂಗ್ರಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಿಎಸ್‌ಟಿ ಪ್ರಾರಂಭದಿಂದಲೂ, ಆರೋಗ್ಯ ವಿಮೆಗೆ ಪಾವತಿಸುವ ಕಂತಿಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಸಮಾಜದ ಬಡ ವರ್ಗಗಳಿಗೆ ಮತ್ತು ಅಂಗವಿಕಲರಿಗಾಗಿ ಇರುವ ಕೆಲವು ವಿಮಾ ಯೋಜನೆಗಳು ತೆರಿಗೆಯಿಂದ ವಿನಾಯಿತಿ ಇದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.