ನವದೆಹಲಿ: ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ಇನ್ನೂ ಹೆಚ್ಚಿನ ಕಂಪನಿಗಳು ಲೀಟರಿಗೆ ₹ 15ರವರೆಗೆ ಕಡಿಮೆ ಮಾಡಲಿವೆ ಎಂಬ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆಯು ಇಳಿಕೆಯಾಗಿದೆ. ಹೀಗಾಗಿ, ದೇಶಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಎಂಆರ್‌ಪಿಯನ್ನು ತಗ್ಗಿಸುವಂತೆ ಕೇಂದ್ರವು ಕಂಪನಿಗಳಿಗೆ ಬುಧವಾರ ಸೂಚಿಸಿತ್ತು. ಇದಾದ ನಂತರದಲ್ಲಿ ಮದರ್ ಡೈರಿ ಕಂಪನಿಯು ‘ಧಾರಾ’ ಬ್ರ್ಯಾಂಡ್‌ನ ಸೋಯಾ ಹಾಗೂ ರೈಸ್ ಬ್ರಾನ್ ಎಣ್ಣೆಗಳ ಬೆಲೆಯನ್ನು ಲೀಟರಿಗೆ ₹ 14ರವರೆಗೆ ತಗ್ಗಿಸಿದೆ.

‘ಕೆಲವು ಕಂಪನಿಗಳು ಬೆಲೆ ಕಡಿಮೆ ಮಾಡಿಲ್ಲ. ಇತರ ಬ್ರ್ಯಾಂಡ್‌ಗಳ ಎಂಆರ್‌ಪಿಗಿಂತ ಹೆಚ್ಚು ಎಂಆರ್‌ಪಿ ನಿಗದಿ ಮಾಡಿರುವ ಕಂಪನಿಗಳು ಬೆಲೆ ಕಡಿಮೆ ಮಾಡಬೇಕು’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಸಲಹೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.