ನವದೆಹಲಿ: ಶಾಶ್ವತ ಖಾತೆ ಸಂಖ್ಯೆಗೆ (ಪ್ಯಾನ್) ಆಧಾರ್ ಸಂಖ್ಯೆಯನ್ನು ಜೋಡಿಸುವಂತೆ ಆದಾಯ ತೆರಿಗೆ ಇಲಾಖೆಯು ನೀಡಿದ್ದ ಮಾರ್ಚ್ 31ರ ಗಡುವನ್ನು ಮುಂದೂಡಲಾಗಿದೆ.

ಜೂನ್ 30ರ ವರೆಗೂ ಪ್ಯಾನ್- ಆಧಾರ್ ಸಂಖ್ಯೆಯನ್ನು ಜೋಡಿಸಲು ಅವಕಾಶವಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

'ದೇಶದಾದ್ಯಂತ ಕೋವಿಡ್ ಸಾಂಕ್ರಾಮಿಕವು ಮತ್ತೆ ಹೆಚ್ಚುತ್ತಿರುವ ಕಾರಣ ಜನರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ಯಾನ್ ಮತ್ತು ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ದಿನಾಂಕವನ್ನು ವಿಸ್ತರಿಸಲಾಗಿದೆ' ಎಂದು ಇಲಾಖೆ ಹೇಳಿದೆ.

ಯಾವುದೇ ಅಡೆತಡೆ ಇಲ್ಲದೆ ಆದಾಯ ತೆರಿಗೆಯ ಸೇವೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಇದೇ ಮಾರ್ಚ್ 31ರ ಒಳಗಾಗಿ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಜೋಡಿಸುವಂತೆ ಇಲಾಖೆಯು ಸೂಚನೆ ನೀಡಿತ್ತು.

ಇದನ್ನೂ ಓದಿ:ಪ್ಯಾನ್–ಆಧಾರ್ ಜೋಡಣೆಗೆ ಮಾ.31ರ ಗಡುವು; ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಆದಾಯ ತೆರಿಗೆ ಕಾಯ್ಡೆ ಸೆಕ್ಷನ್ 139 ಎಎ(2)ರ ಪ್ರಕಾರ ಪ್ಯಾನ್ ಹೊಂದಿರುವ ವ್ಯಕ್ತಿಯು ಆಧಾರ್ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ತೆರಿಗೆ ಇಲಾಖೆಗೆ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.