ನವದೆಹಲಿ: ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಮೂರು ವರ್ಷದ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಜನವರಿ–ಮಾರ್ಚ್ ತ್ರೈಮಾಸಿಕ ಅವಧಿಗೆ ಹೆಚ್ಚಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿದರದಲ್ಲಿ 20 ಮೂಲಾಂಶಗಳು ಮತ್ತು ಮೂರು ವರ್ಷಗಳ ಅವಧಿಯ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರಗಳಲ್ಲಿ 10 ಮೂಲಾಂಶಗಳನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ನಿಗದಿಪಡಿಸಿದ್ದ ದರವನ್ನೇ ಕಾಯ್ದುಕೊಳ್ಳಲಾಗಿದೆ.

ಆದರೆ, ಇತರೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಹಣಕಾಸು ಸಚಿವಾಲಯದ ಸುತ್ತೋಲೆಯ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿ ಮೇಲಿನ ಬಡ್ಡಿ ದರ ಸದ್ಯ ಶೇ 8ರಷ್ಟಿದ್ದು, ಅದನ್ನು ಶೇ 8.2ಕ್ಕೆ ಹೆಚ್ಚಿಸಲಾಗಿದೆ. ಮೂರು ವರ್ಷಗಳ ಅವಧಿಯ ಠೇವಣಿ ಮೇಲಿನ ಬಡ್ಡಿ ದರ ಶೇ 7 ರಿಂದ ಶೇ 7.1ಕ್ಕೆ ಹೆಚ್ಚಿಸಲಾಗಿದೆ.

ಪಿಪಿಎಫ್ ಮತ್ತು ಸೇವಿಂಗ್ಸ್ ಡೆಪಾಸಿಟ್ಸ್ ಮೇಲಿನ ಬಡ್ಡಿ ದರಗಳು ಕ್ರಮವಾಗಿ, ಶೇ 7.1 ಮತ್ತು ಶೇ 4ರಲ್ಲೇ ಮುಂದುವರಿದಿವೆ. ಡಿಸೆಂಬರ್ ತ್ರೈಮಾಸಿಕದಲ್ಲಿ ನಿಗದಿಪಡಿಸಿದ್ದ ದರವನ್ನೇ ಕಾಯ್ದುಕೊಳ್ಳಲಾಗಿದೆ.

ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ದರ ಶೇ 7.5ರಷ್ಟಿದ್ದು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ(ಎನ್ಎಸ್ಸಿ) ಮೇಲಿನ ಬಡ್ಡಿ ಶೇ 7.7ರಷ್ಟಿದೆ.

ಅಲ್ಲದೇ, ಮಾಸಿಕ ಆದಾಯ ಯೋಜನೆಯ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಸದ್ಯಕ್ಕೆ ಈ ಯೋಜನೆಯಡಿ ಶೇ 7.4ರಷ್ಟು ಬಡ್ಡಿದರವಿದೆ. ಅಂಚೆ ಕಚೇರಿಗಳಲ್ಲಿ ಈ ಯೋಜನೆಯಡಿ ಜನರು ಹೂಡಿಕೆ ಮಾಡುತ್ತಾರೆ.

2022ರ ಮೇ ತಿಂಗಳಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರವನ್ನು ಹೆಚ್ಚಿಸಿತ್ತು. ಸದ್ಯ ರೆಪೊ ದರ ಶೇ 6.5ರಷ್ಟಿದೆ. ಪ್ರಸಕ್ತ ವರ್ಷದಲ್ಲಿ ಐದು ಬಾರಿ ನಡೆದಿರುವ ಹಣಕಾಸು ನೀತಿ ಸಭೆಯಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.