ಚೆನ್ನೈ: ತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ಇರುವ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ಕಾನ್ ಘಟಕದಲ್ಲಿ ವಿವಾಹಿತೆಯರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಕಂಪನಿಯು ಯಾವುದೇ ತಾರತಮ್ಯ ಎಸಗಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಉನ್ನತ ಮಟ್ಟದ ತಂಡವು ವರದಿ ನೀಡಿದೆ.

ವಿವಾಹಿತೆಯರ ನೇಮಕದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಕಾರ್ಮಿಕ ಆಯುಕ್ತ (ಕೇಂದ್ರ) ಎ. ನರಸಯ್ಯ ನೇತೃತ್ವದ ತಂಡವು, ಇತ್ತೀಚೆಗೆ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಂಪನಿಯ ಆಡಳಿತ ಮಂಡಳಿ ಮತ್ತು ಉದ್ಯೋಗ ಮಾಡುತ್ತಿರುವ ವಿವಾಹಿತೆಯರ ಜೊತೆಗೆ ಹಲವು ತಾಸು ಚರ್ಚಿಸಿತು. ಈ ವೇಳೆ ವಿವಾಹಿತೆಯರು ಕಂಪನಿಯಲ್ಲಿ ಯಾವುದೇ ತಾರತಮ್ಯ ಎಸಗುತ್ತಿಲ್ಲ ಎಂದು ಸಮಿತಿಯ ಮುಂದೆ ಹೇಳಿದ್ದಾರೆ ಎಂದು ಹೇಳಲಾಗಿದೆ.

ಕಂಪನಿಯಲ್ಲಿ 33 ಸಾವಿರ ಮಹಿಳೆಯರಿದ್ದು, ಈ ಪೈಕಿ 2,700 ವಿವಾಹಿತೆಯರಿದ್ದಾರೆ.

‘ಕಂಪನಿಯು ನೇಮಕಾತಿಯಲ್ಲಿ ನಿಯಮಾವಳಿಗಳನ್ನು ಪಾಲನೆ ಮಾಡಿದೆ. ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ನೌಕರರಿಗೆ ಇಪಿಎಫ್ ಸೇರಿ ಇತರೆ ಎಲ್ಲಾ ಸವಲತ್ತುಗಳನ್ನು ನೀಡಿದೆಯೆಂದು ವರದಿಯಲ್ಲಿ ತಿಳಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.