ಬೆಂಗಳೂರು: ಹ್ಯಾವೆಲ್ಸ್ ಇಂಡಿಯಾ ಕಂಪನಿಯು ವಿದ್ಯುತ್ ಉಳಿತಾಯ ಮಾಡಬಲ್ಲ ಹೊಸ ಶ್ರೇಣಿಯ ಇಕೊಆ್ಯಕ್ಟಿವ್ ಫ್ಯಾನ್ಗಳನ್ನು ಬಿಡುಗಡೆ ಮಾಡಿದೆ.

ಸೀಲಿಂಗ್, ಪೆಡೆಸ್ಟಲ್, ವಾಲ್ ಮತ್ತು ವೆಂಟಿಲೇಟರ್ಗಳಲ್ಲಿ ಅಳವಡಿಸಬಹುದಾದ 19 ಹೊಸ ಮಾದರಿಗಳು ಈ ಶ್ರೇಣಿಯಲ್ಲಿ ಇವೆ. ಇವುಗಳನ್ನು ಬಳಸಿ ಗ್ರಾಹಕರು ವಿದ್ಯುತ್ ಬಿಲ್ನಲ್ಲಿ ವಾರ್ಷಿಕ ₹ 1,900ವರೆಗೆ ಉಳಿತಾಯ ಮಾಡಬಹುದು ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

‘ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ವಿನ್ಯಾಸಗೊಳಿಸಿರುವ ಈ ಫ್ಯಾನ್ಗಳು ವಿನ್ಯಾಸ ಮತ್ತು ಉತ್ತಮ ಗುಣಮಟ್ಟಕ್ಕೆ ಕಂಪನಿಯು ಹೊಂದಿರುವ ಬದ್ಧತೆಯ ಸೂಚಕಗಳು. ಫ್ಯಾನ್ ವಿಭಾಗದಲ್ಲಿ ಸದಾ ಹೊಸತನ್ನು ತರುವ ಪ್ರಯತ್ನ ಮಾಡುತ್ತಿದ್ದು ಇದರಿಂದಾಗಿ ಪ್ರೀಮಿಯಂ ಡೆಕೊರೇಟಿವ್ ವಿಭಾಗದಲ್ಲಿ ಕಂಪನಿಯು ಮುಂಚೂಣಿಯಲ್ಲಿದೆ’ ಎಂದು ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ನ ಎಲೆಕ್ಟ್ರಿಕಲ್ ಕನ್ಸ್ಯೂಮರ್ ಡ್ಯೂರೆಬಲ್ಸ್ನ ಅಧ್ಯಕ್ಷ ರವೀಂದ್ರ ಸಿಂಗ್ ನೇಗಿ ತಿಳಿಸಿದ್ದಾರೆ.

ಐಒಟಿ ಮಾದರಿಯ ಸೀಲಿಂಗ್ ಫ್ಯಾನ್ನಲ್ಲಿ ಉದ್ಯಮದಲ್ಲಿಯೇ ಮೊದಲ ಬಾರಿಗೆ ‘ಸ್ಮಾರ್ಟ್ ಮೋಡ್’ ವೈಶಿಷ್ಟ್ಯ ಬಳಸಲಾಗಿದೆ. ಕೊಠಡಿಯ ಉಷ್ಣತೆ ಮತ್ತು ವಾತಾವರಣಕ್ಕೆ ಅನುಗುಣವಾಗಿ ಫ್ಯಾನ್ ತಾನಾಗಿಯೇ ವೇಗ ಬದಲಿಸಿಕೊಳ್ಳುತ್ತದೆ. ಅಲ್ಲದೆ, ಬಳಕೆದಾರರ ಅನುಕೂಲಕ್ಕಾಗಿ ಉಷ್ಣತೆ ಮತ್ತು ವೇಗದ ವಿವರವನ್ನೂ ನೀಡಲಿದೆ. ಅಲೆಕ್ಸಾ ಮತ್ತು ಗೂಗಲ್ ಹೋಂನಂತಹ ಧ್ವನಿ ಆಧಾರಿತ ಸಾಧನಗಳೊಂದಿಗೆ ಇವನ್ನು ಸಂಪರ್ಕಿಸಬಹುದಾಗಿದೆ. ಮೊಬೈಲ್ ಆ್ಯಪ್ ಮೂಲಕವೇ ಕಾರ್ಯನಿರ್ವಹಿಸಬಹುದಾಗಿದೆ. ಹೊಸ ಸ್ಲಪ್, ಬ್ರೀಜ್, 5 ಹಂತದ ವೇಗ ನಿಯಂತ್ರಣ, ಟೈಮರ್ ಮತ್ತು ಆಟೊಮೆಟಿಕ್ ಆಫ್ ಮತ್ತು ಆನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.