ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಶೇ 33ರಷ್ಟು ಲಾಭ

Published 20 ಜುಲೈ 2024, 15:33 IST
Last Updated 20 ಜುಲೈ 2024, 15:33 IST
ಅಕ್ಷರ ಗಾತ್ರ

ಮುಂಬೈ: 2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ದೇಶದ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 33.17ರಷ್ಟು ಹೆಚ್ಚಳವಾಗಿದೆ.

ಈ ತ್ರೈಮಾಸಿಕದಲ್ಲಿ ₹16,474 ಕೋಟಿ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹12,370 ಕೋಟಿ ತೆರಿಗೆ ನಂತರದ ಲಾಭ ಗಳಿಸಲಾಗಿತ್ತು ಎಂದು ಬ್ಯಾಂಕ್‌ ತಿಳಿಸಿದೆ. 

ಆದರೆ, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹16,511 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಇಳಿಕೆಯಾಗಿದೆ. 

ಕಳೆದ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹57,816 ಕೋಟಿ ವರಮಾನ ಗಳಿಸಿತ್ತು. ಈ ಬಾರಿ ₹83,701 ಕೋಟಿ ಗಳಿಸಿದೆ. 

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹2,860 ಕೋಟಿಯಿಂದ ₹2,602 ಕೋಟಿಗೆ ಇಳಿಕೆಯಾಗಿದೆ. 2023–24ನೇ ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 1.24ರಷ್ಟಿತ್ತು. ಈ ತ್ರೈಮಾಸಿಕದಲ್ಲಿ ಶೇ 1.33ರಷ್ಟಕ್ಕೆ ಇಳಿದಿದೆ. 

ಜೂನ್ ಅಂತ್ಯಕ್ಕೆ ಬ್ಯಾಂಕ್‌ನ ಸಮರ್ಪಕ ಬಂಡವಾಳ ಅನುಪಾತ (ಸಿಎಆರ್‌) ಶೇ 19.33ರಷ್ಟಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT