ನವದೆಹಲಿ: ಎಚ್ಡಿಎಫ್ಸಿ ಸಮೂಹವು ಗುಜರಾತ್ನ ಗಿಫ್ಟ್ ಸಿಟಿಯ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದಲ್ಲಿ (ಐಎಪ್ಎಸ್ಸಿ) ಜೀವ ವಿಮೆ ಹಾಗೂ ಆಸ್ತಿ ನಿರ್ವಹಣಾ ಸೇವೆಗಳನ್ನು ಆರಂಭಿಸಿರುವುದಾಗಿ ಈಚೆಗೆ ತಿಳಿಸಿದೆ.

ಅನಿವಾಸಿ ಭಾರತೀಯರು ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನೆಲೆ ಕಂಡುಕೊಂಡಿರುವ ಭಾರತ ಮೂಲದವರಿಗೆ ಸೇವೆ ಒದಗಿಸುವ ಉದ್ದೇಶದಿಂದ ಈ ಸೇವೆಗಳನ್ನು ಆರಂಭಿಸಲಾಗಿದೆ ಎಂದು ಕಂಪನಿ ಹೇಳಿದೆ.

‘ಭಾರತದ ಅಭಿವೃದ್ಧಿಯ ಗಾಥೆಯಲ್ಲಿ ಭಾಗಿಯಾಗುವುದನ್ನು ನಾವು ಎದುರು ನೋಡುತ್ತಿದ್ದೇವೆ. ಎನ್ಆರ್ಐಗಳಿಗೆ ಎಚ್ಡಿಎಫ್ಸಿ ಲೈಫ್ ಇಂಟರ್ನ್ಯಾಷನಲ್ ಮೂಲಕ ವಿದೇಶಿ ಕರೆನ್ಸಿಯಲ್ಲಿ ವಿಶ್ವದರ್ಜೆಯ ವಿಮಾ ಸೇವೆಗಳನ್ನು ಒದಗಿಸುತ್ತಿದ್ದೇವೆ’ ಎಂದು ಎಚ್ಡಿಎಫ್ಸಿ ಲೈಫ್ ಮತ್ತು ಎಚ್ಡಿಎಫ್ಸಿ ಎಎಂಸಿ ಅಧ್ಯಕ್ಷ ದೀಪಕ್ ಪಾರೇಖ್ ಹೇಳಿದ್ದಾರೆ.

ಎಚ್ಡಿಎಫ್ಸಿ ಎಎಂಸಿ ಇಂಟರ್ನ್ಯಾಷನಲ್ ಕಂಪನಿಯು ಆರಂಭಿಕವಾಗಿ ಆರು ಫಂಡ್ಗಳನ್ನು ಆರಂಭಿಸುವ ಯೋಜನೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.