ಬೆಂಗಳೂರು: ಬ್ಯಾಂಕ್ ಬಡ್ಡಿ ಹೆಚ್ಚುತ್ತಿದ್ದರೂ, ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ದೇಶದ ಏಳು ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟ ಪ್ರಮಾಣವು ಮೌಲ್ಯದ ಲೆಕ್ಕದಲ್ಲಿ ಶೇಕಡ 119ರಷ್ಟು ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಮನೆಗಳ ಮಾರಾಟವು ಈ ಅವಧಿಯಲ್ಲಿ ಮೌಲ್ಯದ ಲೆಕ್ಕದಲ್ಲಿ ಶೇ 114ರಷ್ಟು ಹೆಚ್ಚಳ ಆಗಿದೆ.

ಆಸ್ತಿ ಸಲಹಾ ಸಂಸ್ಥೆ ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ ನಡೆಸಿರುವ ಅಧ್ಯಯನವು ಇದನ್ನು ಹೇಳಿದೆ. ಹಿಂದಿನ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಏಳು ಮಹಾನಗರಗಳಲ್ಲಿ ಅಂದಾಜು ಒಟ್ಟು ₹ 71,295 ಕೋಟಿ ಮೌಲ್ಯದ ಮನೆಗಳ ಮಾರಾಟ ಆಗಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳುಗಳಲ್ಲಿ ಆಗಿರುವ ಮನೆಗಳ ಮಾರಾಟದ ಒಟ್ಟು ಮೌಲ್ಯವು ಅಂದಾಜು ₹ 1.55 ಲಕ್ಷ ಕೋಟಿ ಎಂದು ‘ಅನರಾಕ್’ ತಿಳಿಸಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಆರ್ಬಿಐ ಈ ವರ್ಷದ ಮೇ ತಿಂಗಳಿನಿಂದ ಈಚೆಗೆ ರೆಪೊ ದರವನ್ನು ಹೆಚ್ಚಿಸುತ್ತ ಬಂದಿದೆ. ಮೇ ತಿಂಗಳಿನಿಂದ ಇದುವರೆಗೆ ರೆಪೊ ದರವು ಶೇ 1.9ರಷ್ಟು ಹೆಚ್ಚಳವಾಗಿದೆ. ಬ್ಯಾಂಕ್ಗಳು ಗೃಹ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿವೆ. ಬಡ್ಡಿ ದರ ಹೆಚ್ಚಳವು ಮನೆಗಳ ಮಾರಾಟದ ಮೇಲೆ ಪರಿಣಾಮ ಬೀರಬಹುದು ಎಂಬ ವಾದ ಇತ್ತು.

‘ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಮನೆಗಳ ಮಾರಾಟವು ಏಳು ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂಬುದನ್ನು ಅಂಕಿ–ಅಂಶಗಳು ಸ್ಪಷ್ಟವಾಗಿ ತಿಳಿಸುತ್ತಿವೆ. ಮನೆಗಳ ಬೆಲೆ ಹೆಚ್ಚಳ ಹಾಗೂ ಬಡ್ಡಿ ದರ ಏರಿಕೆಯ ಪರಿಣಾಮವಾಗಿ ಮಾರಾಟ ಕಡಿಮೆ ಆಗಬಹುದು ಎಂಬ ಆತಂಕವನ್ನು ಇದು ದೂರ ಮಾಡಿದೆ’ ಎಂದು ಅನರಾಕ್ ಸಮೂಹದ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ಈ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ ಅಂತ್ಯದವರೆಗಿನ ಅವಧಿಯಲ್ಲಿ ಏಳು ಮಹಾನಗರಗಳಲ್ಲಿ ಒಟ್ಟು 1.73 ಲಕ್ಷ ಮನೆಗಳ ಮಾರಾಟ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಒಟ್ಟು 87 ಸಾವಿರ ಮನೆಗಳ ಮಾರಾಟ ದಾಖಲಾಗಿತ್ತು ಎಂದು ಅನರಾಕ್ ಹೇಳಿದೆ.

‘ತಂತ್ರಜ್ಞಾನ ಉದ್ಯಮ ವಲಯದಲ್ಲಿ ಒಂದೆರಡು ವರ್ಷಗಳಲ್ಲಿ ಕಂಡುಬಂದ ಬೆಳವಣಿಗೆಯ ಕಾರಣದಿಂದಾಗಿವಸತಿ ಮಾರುಕಟ್ಟೆಯಲ್ಲಿ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ. ತಂತ್ರಜ್ಞಾನ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಆಗಿದೆ, ಅಲ್ಲಿ ನೌಕರರ ವೇತನವು ಒಂದು ವರ್ಷದಲ್ಲಿ ಶೇ 18ರಿಂದ ಶೇ 26ರಷ್ಟು ಹೆಚ್ಚಾಗಿದೆ. ಇದು ವಸತಿ ಮಾರುಕಟ್ಟೆಗೆ ಇಂಬು ಕೊಟ್ಟಿದೆ’ ಎಂದು ಪುರವಂಕರ ಲಿಮಿಟೆಡ್ನ ಅಂಗಸಂಸ್ಥೆ ಪ್ರಾವಿಡೆಂಟ್ ಹೌಸಿಂಗ್ನ ಸಿಒಒ ಮಲ್ಲಣ್ಣ ಸಾಸಲು ‘ಪ್ರಜಾವಾಣಿ’ಗೆ ತಿಳಿಸಿದರು.

ವಾಸ್ತವದಲ್ಲಿ ಬ್ಯಾಂಕ್ ಬಡ್ಡಿ ದರವು ಕೋವಿಡ್ ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿ ಇತ್ತು. ಈಗ ಅದು ಸಹಜ ಮಟ್ಟಕ್ಕೆ ಬಂದಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.