ಚೆನ್ನೈ: ವಾಹನ ತಯಾರಿಕಾ ಕಂಪನಿ ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ತಮಿಳುನಾಡಿನಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇ.ವಿ) ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಬಲ್ಲ 100 ಕೇಂದ್ರಗಳನ್ನು ಸ್ಥಾಪಿಸುವುದಾಗಿ ಸೋಮವಾರ ತಿಳಿಸಿದೆ.

180 ಕಿಲೋವಾಟ್ ಸಾಮರ್ಥ್ಯದ ಈ ಕೇಂದ್ರದಲ್ಲಿ 150 ಕಿಲೋವಾಟ್ ಮತ್ತು 30 ಕಿಲೋವಾಟ್‌ನ ಕನೆಕ್ಟರ್‌ಗಳು ಇರಲಿವೆ. ಎಲ್ಲ ಕಂಪನಿಯ ವಾಹನಗಳಿಗೂ ಈ ಕೇಂದ್ರದಲ್ಲಿ ಚಾರ್ಜ್ ಮಾಡಿಕೊಳ್ಳಲು ಅವಕಾಶ ಕೊಡಲಾಗುವುದು.

ವಿದ್ಯುತ್ ಚಾಲಿತ ವಾಹನಗಳ ಮಾಲೀಕರು ಮೈಹುಂಡೈ ಅಪ್ಲಿಕೇಶನ್ ಮೂಲಕ ಸ್ಥಳ, ಚಾರ್ಜಿಂಗ್ ಸ್ಲಾಟ್‌ಗಳ ಮುಂಗಡ ಕಾಯ್ದಿರಿಸುವಿಕೆ, ಡಿಜಿಟಲ್ ಪಾವತಿಗಳನ್ನು ಮಾಡಬಹುದಾಗಿದೆ.

ಗ್ರಾಹಕರ ಅನುಕೂಲಕ್ಕಾಗಿ ಈ ಚಾರ್ಜಿಂಗ್ ಕೇಂದ್ರದ ಜೊತೆಗೆ, ಪ್ರಸ್ತುತ ತಮಿಳುನಾಡಿನಲ್ಲಿ ಲಭ್ಯವಿರುವ 170ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಮೈಹುಂಡೈ ಆ್ಯಪ್‌ನ ‘ಇ.ವಿ ಚಾರ್ಜ್’ ವಿಭಾಗದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಅಪ್ಲಿಕೇಶನ್ ಮುಕ್ತವಾಗಿದ್ದು, ಹುಂಡೈ ಮತ್ತು ಇತರೆ ಇ.ವಿ ಬಳಕೆದಾರರು ಬಳಸಿಕೊಳ್ಳಬಹುದಾಗಿದೆ ಎಂದು ಕಂಪನಿಯು ತಿಳಿಸಿದೆ.

ಭಾರತದಲ್ಲಿ ಎಚ್‌ಎಂಐಎಲ್ 28ನೇ ವರ್ಷವನ್ನು ಆಚರಿಸುತ್ತಿದೆ. ಇದೇ ವೇಳೆ ಚೆನ್ನೈನಲ್ಲಿ ನಮ್ಮ ಮೊದಲ 180 ಕಿಲೋವಾಟ್ ವೇಗದ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಅನ್ನು ಉದ್ಘಾಟಿಸಲಾಗಿದೆ. ಹುಂಡೈನ ‘ಮಾನವ ಕುಲದ ಒಳಿತಿಗಾಗಿ ಪ್ರಗತಿ’ ಎಂಬ ಧ್ಯೇಯಕ್ಕೆ ಅನುಗುಣವಾಗಿ, ಎಲ್ಲ ಇ.ವಿ ಬಳಕೆದಾರರ ಅನುಕೂಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.