ನವದೆಹಲಿ: 2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿಯ ನಿವ್ವಳ ಲಾಭದಲ್ಲಿ ಶೇ 26ರಷ್ಟು ಇಳಿಕೆಯಾಗಿದೆ.

ಕಂಪನಿಯು ಒಟ್ಟು ₹174 ಕೋಟಿ ಲಾಭ ಗಳಿಸಿದೆ. 2022–23ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹235 ಕೋಟಿ ಲಾಭ ಗಳಿಸಿತ್ತು. ವೆಚ್ಚದ ಪ್ರಮಾಣ ಹೆಚ್ಚಳವೇ ಲಾಭ ಕುಸಿತ ಕಾರಣವಾಗಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ವರಮಾನದಲ್ಲಿ ಶೇ 17ರಷ್ಟು ಏರಿಕೆಯಾಗಿದ್ದು, ₹14,788 ಕೋಟಿಗೆ ಮುಟ್ಟಿದೆ. ವೆಚ್ಚವು ₹2,320 ಕೋಟಿಯಿಂದ ₹2,550 ಕೋಟಿಗೆ ಹೆಚ್ಚಳವಾಗಿದೆ. 2023–24ರ ಪೂರ್ಣ ಹಣಕಾಸು ವರ್ಷದ ನಿವ್ವಳ ಲಾಭದಲ್ಲಿ ಶೇ 5ರಷ್ಟು ಏರಿಕೆಯಾಗಿದೆ. ಲಾಭವು ₹811 ಕೋಟಿಯಿಂದ ₹852 ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

₹2,311 ಕೋಟಿ ಎಂ–ಕ್ಯಾಪ್ ಇಳಿಕೆ:

ನಿವ್ವಳ ಲಾಭದಲ್ಲಿ ಇಳಿಕೆ ಕಂಡಿರುವುದರಿಂದ ಕಂಪನಿಯ ಷೇರಿನ ಮೌಲ್ಯವು ಶೇ 3ರಷ್ಟು ಇಳಿದಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಶೇ 6ರಷ್ಟು ಕುಸಿತ ಕಂಡಿತ್ತು.

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆಯು ಕ್ರಮವಾಗಿ ₹577 ಮತ್ತು ₹578 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ಒಂದೇ ದಿನ ₹2,311 ಕೋಟಿ ಕರಗಿದೆ. ಒಟ್ಟು ಎಂ–ಕ್ಯಾಪ್ ₹83,131 ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.