ನವದೆಹಲಿ: ಸೆಪ್ಟೆಂಬರ್ನಲ್ಲಿ ದೇಶದ ವ್ಯಾಪಾರ ಕೊರತೆ ಅಂತರವು ₹1.74 ಲಕ್ಷ ಕೋಟಿ ಆಗಿದ್ದು, ಐದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಆಮದು ಮತ್ತು ರಫ್ತು ವಹಿವಾಟಿನ ನಡುವಿನ ವ್ಯತ್ಯಾಸವನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.

ಸರಕುಗಳ ರಫ್ತು ಪ್ರಮಾಣದಲ್ಲಿ ಶೇ 0.5ರಷ್ಟು ಹೆಚ್ಚಳವಾಗಿದ್ದು, ₹2.90 ಲಕ್ಷ ಕೋಟಿ ಆಗಿದೆ. ಆಮದು ಪ್ರಮಾಣದಲ್ಲಿ ಶೇ 1.6ರಷ್ಟು ಏರಿಕೆಯಾಗಿದ್ದು, ₹4.65 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ಆಗಸ್ಟ್ನಲ್ಲಿ ವ್ಯಾಪಾರ ಕೊರತೆ ಅಂತರವು 10 ತಿಂಗಳ ಗರಿಷ್ಠ ಮಟ್ಟವಾದ ₹2.49 ಲಕ್ಷ ಕೋಟಿಗೆ ಮುಟ್ಟಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ರಫ್ತು ಪ್ರಮಾಣವು ಆಗಸ್ಟ್ ಮತ್ತು ಜುಲೈನಲ್ಲಿ ಕ್ರಮವಾಗಿ ಶೇ 9.3 ಮತ್ತು ಶೇ 1.2ರಷ್ಟು ಕಡಿಮೆಯಾಗಿದೆ.

ಪ್ರಸಕ್ತ ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ರಫ್ತು ಪ್ರಮಾಣವು ಶೇ 1ರಷ್ಟು ಏರಿಕೆಯಾಗಿದ್ದು, ₹17.91 ಲಕ್ಷ ಕೋಟಿಯಾಗಿದೆ. ಆಮದು ಪ್ರಮಾಣವು ಶೇ 6ರಷ್ಟು ಹೆಚ್ಚಳವಾಗಿದ್ದು, ₹29.46 ಲಕ್ಷ ಕೋಟಿ ಆಗಿದೆ. ವ್ಯಾಪಾರ ಕೊರತೆಯು ₹11.54 ಲಕ್ಷ ಕೋಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.