ಮುಂಬೈ: ದೇಶದ ಚಿನ್ನದ ಬೇಡಿಕೆಯು ಪ್ರಸಕ್ತ ವರ್ಷದ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಚಿನ್ನ ಮಂಡಳಿಯ (ಡಬ್ಲ್ಯುಜಿಸಿ) ವರದಿ ಮಂಗಳವಾರ ತಿಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 158 ಟನ್ನಷ್ಟು ಚಿನ್ನದ ಬೇಡಿಕೆಯಿತ್ತು. ಈ ತ್ರೈಮಾಸಿಕದಲ್ಲಿ 149 ಟನ್ಗೆ ಇಳಿದಿದೆ.

‘ಹಳದಿ ಲೋಹದ ಧಾರಣೆ ಏರಿಕೆಯಿಂದಾಗಿ ಗ್ರಾಹಕರಿಂದ ಖರೀದಿಯು ಕಡಿಮೆಯಾಯಿತು. ಇದರಿಂದ ಈ ಅವಧಿಯಲ್ಲಿ ಬೇಡಿಕೆಯು ತಗ್ಗಿದೆ. ಆದರೆ, ಮೌಲ್ಯದ ಲೆಕ್ಕಾಚಾರದಲ್ಲಿ ಏರಿಕೆಯಾಗಿದೆ’ ಎಂದು ಡಬ್ಲ್ಯುಜಿಸಿಯ ಭಾರತದ ಪ್ರಾದೇಶಿಕ ಸಿಇಒ ಸಚಿನ್ ಜೈನ್ ಹೇಳಿದ್ದಾರೆ.

ಆಮದು ಹೆಚ್ಚಳ

ಕಳೆದ ವರ್ಷದ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ 182 ಟನ್ನಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಈ ವರ್ಷದ ಇದೇ ಅವಧಿಯಲ್ಲಿ 196 ಟನ್ ಆಮದು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಶೇ 8ರಷ್ಟು ಹೆಚ್ಚಳವಾಗಿದೆ.

ಈ ವರ್ಷದ ಚಿನ್ನದ ಬೇಡಿಕೆಯು 700 ಟನ್ನಿಂದ 750 ಟನ್ ಆಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.