ನವದೆಹಲಿ: ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ (ಎಟಿಸಿ) ಘಟಕದ ಅನುಮತಿ ಪಡೆಯದೆ ಇಂಡಿಗೊ ವಿಮಾನವೊಂದು ನವದೆಹಲಿಯಿಂದ ಅಜರ್‌ಬೈಜಾನ್ ದೇಶದ ರಾಜಧಾನಿ ಬಾಕುಗೆ ಹಾರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಜನವರಿ 28ರಂದು ಈ ಘಟನೆ ನಡೆದಿದ್ದು, ಸುರಕ್ಷತಾ ಮಾನದಂಡ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತನಿಖೆಗೆ ಆದೇಶಿಸಿದೆ. ಅಲ್ಲದೇ, ವಿಚಾರಣೆ ಕಾಯ್ದಿರಿಸಿದ ಇಬ್ಬರು ಪೈಲಟ್‌ಗಳನ್ನು ಕೆಲಸದ ಪಾಳಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾರಾಟಕ್ಕೂ ಮೊದಲು ಸರದಿ ಸಾಲಿನಲ್ಲಿ ವಿಮಾನವನ್ನು ನಿಲುಗಡೆ ಮಾಡಿ ಅನುಮತಿ ನೀಡುವವರೆಗೂ ಕಾಯುವಂತೆ ಎಟಿಸಿ ಸೂಚಿಸಿತ್ತು. ಆದರೆ, ಪೈಲಟ್ ಈ ಸೂಚನೆ ಪಾಲಿಸಿಲ್ಲ ಎಂದು ತಿಳಿಸಿದ್ದಾರೆ.

‘ಕಂಪನಿಗೆ ಸೇರಿದ ವಿಮಾನವು (6ಇ 1803) ನಿಯಮ ಉಲ್ಲಂಘಿಸಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಪೈಲಟ್‌ಗಳು ತಪ್ಪು ಎಸಗಿರುವುದು ಸಾಬೀತಾದರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಇಂಡಿಗೊ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.