ಮುಂಬೈ: ಭಾರತದಲ್ಲಿ ಮಾರಾಟ ವಿಸ್ತರಿಸುವ ಉದ್ದೇಶದಿಂದಆ್ಯಪಲ್ ಕಂಪನಿಯು ಈಚೆಗಷ್ಟೇ ಬಿಡುಗಡೆ ಮಾಡಿರುವ ಐಫೋನ್ 10ಆರ್ ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿಮೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

64 ಜಿಬಿ ಸಾಮರ್ಥ್ಯದ ಐಫೋನ್ 10ಆರ್ ಬೆಲೆಯನ್ನು ₹ 17,900 ರಷ್ಟು ಕಡಿಮೆ ಮಾಡಲಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಕ್ಯಾಷ್‌ಬ್ಯಾಕ್ ಸಹ ಸಿಗಲಿದೆ.ಬೇಡಿಕೆಯನ್ನು ಆಧರಿಸಿ ಬೇರೆ ಸಾಧನಗಳ ಬೆಲೆಯಲ್ಲಿಯೂ ಬದಲಾವಣೆ ಮಾಡಲು ಕಂಪನಿ ಮುಂದಾಗಿದೆ.

ಕಂಪನಿಯ ಭಾರತದ ಜಾಲತಾಣದಲ್ಲಿ ಬೆಲೆಯಲ್ಲಿ ಯಾವುದೇ ಬದಲಾವಣೆ (₹ 76,900) ಆಗಿಲ್ಲ. ಆದರೆ, ಮಳಿಗೆಗಳಲ್ಲಿ ₹ 59 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ಗ್ರಾಹಕರು ತಿಳಿಸಿದ್ದಾರೆಂದು ಸುದ್ದಿ ಸಂಸ್ಥೆ ಹೇಳಿಕೊಂಡಿದೆ.ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ₹69,999 ಬೆಲೆಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.