ನವದೆಹಲಿ: ವೈವಿಧ್ಯಮಯ ವಹಿವಾಟು ನಡೆಸುವ ಉದ್ದಿಮೆ ಸಂಸ್ಥೆ ಐಟಿಸಿ, ಮಸಾಲೆತಯಾರಿಸುವ ಸನ್ರೈಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಎಸ್ಎಫ್ಎಪಿಎಲ್) ಖರೀದಿಸಿದೆ.

ಈ ಸ್ವಾಧೀನ ಪ್ರಕ್ರಿಯೆಯ ಒಟ್ಟಾರೆ ಮೊತ್ತದ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಖರೀದಿ ಮೊತ್ತ ₹1,800 ಕೋಟಿಗಳಿಂದ ₹2,000 ಕೋಟಿಗಳಷ್ಟು ಇರಲಿದೆ.

70 ವರ್ಷಗಳಿಂದ ವಹಿವಾಟು ನಡೆಸುತ್ತಿರುವ ಸನ್ರೈಸ್, ಪೂರ್ವ ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇದೆ. ಈ ಉದ್ದೇಶಿತ ಸ್ವಾಧೀನದಿಂದ ತನ್ನ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್ಎಂಸಿಜಿ) ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ ಎಂದು ಐಟಿಸಿ ತಿಳಿಸಿದೆ. ಷೇರು ಖರೀದಿ ಮೂಲಕ ಈ ಸ್ವಾಧೀನ ಪ್ರಕ್ರಿಯೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.