ನವದೆಹಲಿ: ಲಾಕ್ಡೌನ್ನಿಂದ ಹಣಕಾಸು ಸಮಸ್ಯೆ ಎದುರಿಸುತ್ತಿರುವವರಿಗೆ ನೆರವಾಗಲು ಕೇಂದ್ರ ಸರ್ಕಾರ ಜನ್ಧನ್ ಖಾತೆಗೆ ಹಣ ವರ್ಗಾಯಿಸುತ್ತಿದೆ. ಇದರಿಂದಾಗಿ ಈ ಖಾತೆಗಳಲ್ಲಿನ ಠೇವಣಿ ಮೊತ್ತದಲ್ಲಿ ಏರಿಕೆಯಾಗುತ್ತಿದೆ.

2020ರ ಏಪ್ರಿಲ್ 1ರ ಅಂತ್ಯಕ್ಕೆ ಒಟ್ಟಾರೆ ಠೇವಣಿ ಮೊತ್ತ ₹ 1.20 ಲಕ್ಷ ಕೋಟಿ ಇತ್ತು. ಇದು ಏಪ್ರಿಲ್ 8ರ ಅಂತ್ಯಕ್ಕೆ ₹ 1.28 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಒಂದು ವಾರದ ಅವಧಿಯಲ್ಲಿ ಠೇವಣಿ ಮೊತ್ತದ ಅತಿ ಗರಿಷ್ಠ ಏರಿಕೆ ಇದಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ನಲ್ಲಿ ಜನ್ಧನ್ ಖಾತೆ ಹೊಂದಿರುವ 19.86 ಕೋಟಿ ಮಹಿಳೆಯರಿಗೆ ₹ 9,930 ಕೋಟಿ ನೀಡಲಾಗಿದೆ. ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.