ನವದೆಹಲಿ: ಬ್ಯಾಂಕೇತರ ಹಣಕಾಸು ಕಂಪನಿಯಾದ ಮಹೀಂದ್ರ ಆ್ಯಂಡ್ ಮಹೀಂದ್ರ ಫೈನಾನ್ಶಿಯಲ್ ಸರ್ವಿಸಸ್, 2023–24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹619 ಕೋಟಿ ನಿವ್ವಳ ಲಾಭಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 10ರಷ್ಟು ಕಡಿಮೆಯಾಗಿದೆ. ಮಿಜೋರಾಂನ ಐಜ್ವಾಲ್‌ನಲ್ಲಿ ಇರುವ ತನ್ನ ಶಾಖೆಯಲ್ಲಿನ 2,887 ಸಾಲದ ಖಾತೆಗಳಲ್ಲಿ ವಂಚನೆ ಎಸಗಿರುವುದು ಸತ್ಯಶೋಧನೆ ವೇಳೆ ಬೆಳಕಿಗೆ ಬಂದಿದೆ. ಚಿಲ್ಲರೆ ವಾಹನ ಸಾಲ ವಿತರಣೆಯಲ್ಲಿ ₹135.9 ಕೋಟಿ ವಂಚಿಸಲಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.

ನಕಲಿ ಕೆವೈಸಿ ಮತ್ತು ಆಸ್ತಿ ದಾಖಲೆ ಪತ್ರಗಳನ್ನು ನೀಡಿ ಸಾಲ ಪಡೆದು ವಂಚಿಸಲಾಗಿದೆ. ಈ ಅಕ್ರಮದ ಬಗ್ಗೆ ತನಿಖೆಗೆ ಕಾನೂನು ತಜ್ಞರು ಹಾಗೂ ಲೆಕ್ಕಪತ್ರ ತಜ್ಞರನ್ನು ನೇಮಿಸಲಾಗಿತ್ತು. ಈ ಶಾಖೆಯನ್ನು ಹೊರತುಪಡಿಸಿದರೆ ದೇಶದ ಉಳಿದೆಡೆ ಇರುವ ಶಾಖೆಗಳಲ್ಲಿ ಯಾವುದೇ ವಂಚನೆ ಪ್ರಕರಣಗಳು ನಡೆದಿಲ್ಲ ಎಂದು ಹೇಳಿದೆ.

2022–23ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ₹3,057 ಕೋಟಿ ವರಮಾನಗಳಿಸಿತ್ತು. 2023–24ರಲ್ಲಿ ₹3,706 ಕೋಟಿ ಗಳಿಸಿದೆ. ಒಟ್ಟು ವರಮಾನದಲ್ಲಿ ಶೇ 21ರಷ್ಟು ಏರಿಕೆಯಾಗಿದೆ. ನಿವ್ವಳ ಬಡ್ಡಿ ವರಮಾನದಲ್ಲಿ ಶೇ 14ರಷ್ಟು ಏರಿಕೆಯಾಗಿದ್ದು, ₹1,917 ಕೋಟಿ ಗಳಿಸಿದೆ.

2023–24ರ ಪೂರ್ಣ ಆರ್ಥಿಕ ವರ್ಷದಲ್ಲಿ ತೆರಿಗೆ ನಂತರದ ನಿವ್ವಳ ಲಾಭದಲ್ಲಿ ಶೇ 11ರಷ್ಟು ಕುಸಿತವಾಗಿದೆ. ವರಮಾನದಲ್ಲಿ ಶೇ 23ರಷ್ಟು ಏರಿಕೆಯಾಗಿದ್ದು, ₹13,562 ಕೋಟಿ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.