ಬೆಂಗಳೂರು: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ 500ನೇ ನೆಕ್ಸಾ ಮಾರಾಟ ಮಳಿಗೆಯನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಘಾಟಿಸಿದೆ.

ಇದರೊಂದಿಗೆ, ಕಂಪನಿಯ ಅರೆನಾ, ನೆಕ್ಸಾ ಮತ್ತು ಕಮರ್ಷಿಯಲ್ ಮಳಿಗೆಗಳ ಸಂಖ್ಯೆ ಈಗ 3,925ಕ್ಕೇರಿದೆ.

ಮಾರುತಿ ಸುಜುಕಿ ತನ್ನ ನೆಕ್ಸಾ ರಿಟೇಲ್ ಅನ್ನು 2015ರ ಜುಲೈನಲ್ಲಿ ಪ್ರಾರಂಭಿಸಿತು. ನೆಕ್ಸಾ ಅನ್ನು ಉದ್ಘಾಟಿಸಿದ ಒಂದು ವರ್ಷದೊಳಗೆ, ಕಂಪನಿಯು 94 ನಗರಗಳಲ್ಲಿ 100 ನೆಕ್ಸಾ ಮಾರಾಟ ಮಳಿಗೆಗಳನ್ನು ಸ್ಥಾಪಿಸಿತು. 2023-24ನೇ ಹಣಕಾಸು ವರ್ಷದಲ್ಲಿ ನೆಕ್ಸಾ ಮಳಿಗೆಗಳ ಮೂಲಕ 5.61 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದರ ಹಿಂದಿನ ಹಣಕಾಸು ವರ್ಷದ ಮಾರಾಟಕ್ಕೆ ಹೋಲಿಸಿದರೆ, ಶೇ 54ರಷ್ಟು ಬೆಳವಣಿಗೆ ದಾಖಲಿಸಿದಂತಾಗಿದೆ. ಮಾರುತಿ ಸುಜುಕಿಯ ದೇಶೀಯ ಮಾರಾಟದಲ್ಲಿ ನೆಕ್ಸಾ ಸುಮಾರು ಶೇ 30ರಷ್ಟು ಪಾಲು ಹೊಂದಿದೆ ಎಂದು ಕಂಪನಿ ತಿಳಿಸಿದೆ.

‘ಗ್ರಾಹಕರ ಆದ್ಯತೆಗೆ ತಕ್ಕಂತೆ ವಾಹನಗಳನ್ನು ಒದಗಿಸಲು ಕಂಪನಿ ನಿರಂತರವಾಗಿ ಶ್ರಮಿಸುತ್ತಿದೆ. ಗ್ರಾಹಕರು ಮತ್ತು ಡೀಲರ್‌ಗಳ ಬೆಂಬಲ ಹಾಗೂ ಪ್ರೋತ್ಸಾಹದಿಂದ ಕಂಪನಿಯ ವಾಹನಗಳ ಮಾರಾಟವು ಹೆಚ್ಚಾಗುತ್ತಿದೆ’ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟಕೆಯುಚಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.