ಬೆಂಗಳೂರು: ಈ ಬಾರಿಯ ಹಬ್ಬದ ವಿಶೇಷ ಮಾರಾಟದಲ್ಲಿ ಇ ಕಾಮರ್ಸ್ ಸಂಸ್ಥೆಗಳು ಭರ್ಜರಿ ವ್ಯಾಪಾರದ ಮೂಲಕ ಸದ್ದು ಮಾಡಿವೆ.

ಒಟ್ಟಾರೆ ಮಾರಾಟದಲ್ಲಿ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಶೇ 49ರಷ್ಟು ಪಾಲು ಪಡೆದುಕೊಂಡಿದ್ದರೆ, ಸಾಫ್ಟ್‌ಬ್ಯಾಂಕ್ ಹೂಡಿಕೆ ಹೊಂದಿರುವ ಮೀಶೊ ಶೇ 21ರಷ್ಟು ಪಾಲು ಪಡೆದುಕೊಂಡು ಎರಡನೇ ಸ್ಥಾನಕ್ಕೆ ಜಿಗಿದಿದೆ ಎಂದು ಕನ್ಸಲ್ಟೆನ್ಸಿ ಸಂಸ್ಥೆರೆಡ್‌ಸೀರ್ ಹೇಳಿದೆ.

ರೆಡ್‌ಸೀರ್‌ನ ಉಜ್ವಲ್ ಚೌಧರಿಯವರ ಪ್ರಕಾರ, ಕಡಿಮೆ ಸಮಯದಲ್ಲಿಯೇ ಗರಿಷ್ಠ ಸಂಖ್ಯೆಯ ಮಾರುಕಟ್ಟೆ ವಿಸ್ತರಣೆ ಮತ್ತು ಪಾಲನ್ನು ಮೀಶೊ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಈ ಮೂಲಕ ಅಮೆಜಾನ್ ಇಂಡಿಯಾವನ್ನು ಮೀಶೊ ಹಿಂದಿಕ್ಕಿದ್ದು, ಗರಿಷ್ಠ ಸಂಖ್ಯೆಯ ಅರ್ಡರ್‌ಗಳನ್ನು ತನ್ನದಾಗಿಸಿಕೊಂಡಿದೆ ಎಂದು ವರದಿ ಹೇಳಿದೆ.

ಸೆಪ್ಟೆಂಬರ್ ಮೂರನೇ ವಾರದಲ್ಲಿ ದೇಶದಲ್ಲಿ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಮೀಶೊ ಸಹಿತ ಹಲವು ಪ್ರಮುಖ ಇ ಕಾಮರ್ಸ್ ಸಂಸ್ಥೆಗಳು ಹಬ್ಬದ ವಿಶೇಷ ಮಾರಾಟವನ್ನು ವಾರಗಳ ಕಾಲ ನಡೆಸಿದ್ದವು. ಅದರಲ್ಲಿ ಗರಿಷ್ಠ ಸಂಖ್ಯೆಯ ಮಾರಾಟ ದಾಖಲೆಯನ್ನು ಈ ಸಂಸ್ಥೆಗಳು ಸೃಷ್ಟಿಸಿವೆ.

ಹಬ್ಬದ ಋತು: ವಾಹನಕ್ಕೆ ಬೇಡಿಕೆ

ದೇಶದಲ್ಲಿ ನಡೆದಿದ್ದ ಒಟ್ಟಾರೆ ಇ ಕಾಮರ್ಸ್ ಮಾರಾಟದಲ್ಲಿ ಫ್ಲಿಪ್‌ಕಾರ್ಟ್, ಮಿಂತ್ರಾ ಮತ್ತು ಶಾಪ್ಸಿ ಜಂಟಿಯಾಗಿ ಶೇ 62ರಷ್ಟು ಮಾರುಕಟ್ಟೆ ಪಾಲು ಪಡೆದಿದ್ದರೆ, ಅಮೆಜಾನ್ ಶೇ 26ರಷ್ಟು ಆರ್ಡರ್ ಪಾಲು ಪಡೆದು ಎರಡನೇ ಸ್ಥಾನದಲ್ಲಿದೆ.

ಖರೀದಿ ಭರಾಟೆಗೆ ಕೊಡುಗೆ ಶೇ 20ರಷ್ಟು ಜನರಿಂದ ಮಾತ್ರ

ಆದರೆ ಇದೊಂದು ಊಹಾತ್ಮಕ ವರದಿ ಎಂದು ಅಮೆಜಾನ್ ವಕ್ತಾರ ಹೇಳಿದ್ದಾರೆ. ದೃಢ ಮತ್ತು ಪಾರದರ್ಶಕ ಮಾದರಿಯನ್ನು ಅನುಸರಿಸಲಾಗಿಲ್ಲ ಎಂದಿದ್ದಾರೆ. 12 ದಿನಗಳ ಹಬ್ಬದ ಮಾರಾಟದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಆರ್ಡರ್ ಪಡೆದಿರುವುದಾಗಿ ಅಮೆಜಾನ್ ತಿಳಿಸಿದೆ. ಅಮೆಜಾನ್, ದೇಶದಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹಬ್ಬದ ವಿಶೇಷ ಮಾರಾಟವನ್ನು ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.