ಸ್ಯಾನ್ ಫ್ರಾನ್ಸಿಸ್ಕೊ: ಎರಡನೇ ಹಂತದ ಉದ್ಯೋಗ ಕಡಿತಕ್ಕೆ ಕೈಹಾಕಿರುವ ಮೆಟಾ (ಫೇಸ್‌ಬುಕ್) ಶೇಕಡಾ 13 ರಷ್ಟು ಅಥವಾ ಸುಮಾರು 11,000 ಉದ್ಯೋಗಿಗಳನ್ನು ವಜಾ ಮಾಡಲಿದೆ. ಮುಂದಿನ ವಾರದಿಂದ ಆರಂಭವಾಗಲಿರುವ ಈ ವಜಾ ಪ್ರಕ್ರಿಯೆಯಲ್ಲಿ ಎಂಜಿನಿಯರಿಂಗ್ ಅಲ್ಲದ ಉದ್ಯೋಗಿಗಳು ತೀವ್ರ ಹೊಡೆತ ಅನುಭವಿಸಲಿದ್ದಾರೆ.

ಅನೇಕ ಸುತ್ತುಗಳಲ್ಲಿ ಹೆಚ್ಚುವರಿ ವಜಾ ಮಾಡಲು ಮೆಟಾ ಯೋಜಿಸುತ್ತಿದೆ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಮಾಧ್ಯಮ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಪ್ರಕಟಿಸಿದೆ.

ಕಳೆದ ವರ್ಷದಂತೆಯೇ ಈ ಬಾರಿಯೂ ಶೇಕಡಾ 13ರಷ್ಟು ಸಿಬ್ಬಂದಿಯನ್ನು ಮೆಟಾ ವಜಾ ಮಾಡಲಿದೆ ಎಂದು ವರದಿ ಹೇಳಿದೆ.

‘ಈ ಕಡಿತಗಳೊಂದಿಗೆ ಕಂಪನಿಯು ಕೆಲವು ಯೋಜನೆಗಳನ್ನು ಮತ್ತು ತಂಡಗಳನ್ನು ರದ್ದು ಮಾಡುವ ಸಾಧ್ಯತೆಗಳಿವೆ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫೇಸ್‌ಬುಕ್ ಸಂಸ್ಥೆಯ 18 ವರ್ಷಗಳ ಇತಿಹಾಸದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಉದ್ಯೋಗಿಗಳನ್ನು ತೆಗೆದುಹಾಕಲಾಗಿತ್ತು. ಮೆಟಾದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಶೇ 13ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಇದು ಅಮೆರಿಕದ ಐಟಿ ಕಂಪನಿಗಳಲ್ಲೇ ಅತಿದೊಡ್ಡ ಉದ್ಯೋಗನಷ್ಟ ಎನಿಸಿಕೊಂಡಿತ್ತು.

ಇವುಗಳನ್ನೂ ಓದಿ

ಆಳ–ಅಗಲ | ಸಿಲಿಕಾನ್ ವ್ಯಾಲಿಯಲ್ಲಿ ಬಿರುಗಾಳಿ: ನೌಕರಿಗೆ ಕತ್ತರಿ

ಐಟಿ ಕಂಪನಿಗಳ ಸಾಮೂಹಿಕ ಉದ್ಯೋಗ ಕಡಿತಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.