ನವದೆಹಲಿ: ದೇಶದ ಅತಿ ದೊಡ್ಡ ಹೋಲ್‌ಸೇಲ್ ಹಾಗೂ ಫುಡ್ ರೀಟೈಲ್ ಸಂಸ್ಥೆ ‘ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ‘ಯನ್ನು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿದೆ.

₹ 2850 ಕೋಟಿಗೆ ಈ ಖರೀದಿ ಒಪ್ಪಂದ ನಡೆದಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧೀನ ಸಂಸ್ಥೆ ರಿಲಯನ್ಸ್ ರಿಟೈಲ್ ವೆಂಚರ್ಸ್ ಲಿಮಿಟೆಡ್ (RRVL) ಮೆಟ್ರೋದ ಭಾರತದ ಸ್ಟೋರ್‌ಗಳನ್ನು ಖರೀದಿ ಮಾಡಿದೆ.

ಡಿಸೆಂಬರ್ 22 ರಂದು ಈ ಡೀಲ್ ನಡೆದಿದ್ದು, ಮೆಟ್ರೋ ಇಂಡಿಯಾದ ಶೇ 100 ರಷ್ಟು ಷೇರುಗಳನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಂಡಿದೆ.

ಜರ್ಮನಿ ಮೂಲದ ‘ಮೆಟ್ರೋ ಎಜಿ‘ ಒಡೆತನದ ಭಾರತದ ಸ್ಟೋರ್‌ಗಳು ಇನ್ನುಮುಂದೆ ದೇಶದ ಎರಡನೇ ಶ್ರೀಮಂತ ಉದ್ಯಮಿ ಅಂಬಾನಿ ಒಡೆತನದಲ್ಲಿ ಇರಲಿದೆ.

ಬೆಂಗಳೂರು ಸಹಿತ ದೇಶದ 21 ನಗರಗಳಲ್ಲಿ ಒಟ್ಟು 31 ಮಳಿಗೆಗಳನ್ನು ಮೆಟ್ರೋ ಹೊಂದಿದೆ. ಸುಮಾರು 3500 ಮಂದಿ ಉದ್ಯೋಗಿಗಳು ಇದ್ದಾರೆ. 2003ರಲ್ಲಿ ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.