ಈ ಡಿಜಿಟಲ್ ಯುಗದಲ್ಲಿಯೂ ಮೊಬೈಲ್ ಹೊಂದಿರುವವರೆಲ್ಲರೂ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಬಳಸುತ್ತಿಲ್ಲ ಎಂದರೆ ನಂಬುತ್ತೀರಾ? ನಂಬಲೇ ಬೇಕು. ದೇಶದಲ್ಲಿ ಅಂದಾಜು 117 ಕೋಟಿ ಮೊಬೈಲ್ ಬಳಕೆದಾರರಿದ್ದರೆ, ಅವರಲ್ಲಿ ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿರುವವರು ಅಂದಾಜು 12 ಕೋಟಿ ಮಾತ್ರ.

ಹಾಗಿದ್ದರೆ ಮೊಬೈಲ್ ಬ್ಯಾಂಕಿಂಗ್ ಅಷ್ಟೊಂದು ಕಷ್ಟವೇ ಎಂದು ಪ್ರಶ್ನಿಸಿದರೆ. ಕಷ್ಟವೇನಲ್ಲ, ಬಳಸುತ್ತಿಲ್ಲ ಅಷ್ಟೇ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ತುರ್ತು ಸಂದರ್ಭದಲ್ಲಿ ಯಾವುದಾದರೂ ಬಿಲ್ ಪಾವತಿಸಬೇಕಿದ್ದರೆ, ಯಾರಿಗಾದರೂ ಹಣ ವರ್ಗಾಯಿಸಬೇಕಿದ್ದರೆ, ‘ನಾನು ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿಲ್ಲ, ಅರ್ಜೆಂಟ್ ಇದೆ. ನಿಮ್ಮ ಮೊಬೈಲ್‌ನಿಂದ ಕಳುಹಿಸಿ, ಬಳಿಕ ನಿಮ್ಮ ಬಳಿ ಕಲಿತುಕೊಳ್ಳುತ್ತೇನೆ’ ಎನ್ನುತ್ತಾರೆ. ಇನ್ನೂ ಕೆಲವರು ಪಾವತಿ ಆಪ್ಲಿಕೇಷನ್ (ಆ್ಯಪ್) ಡೌನ್‌ಲೋಡ್ ಮಾಡಿಕೊಂಡಿರುತ್ತಾರೆ. ಆದರೆ, ಅದನ್ನು ಬಳಸಿ ನೋಡುವ ಗೋಜಿಗೇ ಹೋಗಿರುವುದಿಲ್ಲ. ಆಯಾ ಬ್ಯಾಂಕ್‌ಗಳ ಆ್ಯಪ್‌ಗಳಲ್ಲದೇ, ಪೇಟಿಎಂ, ಫೋನ್‌ಪೇ, ಗೂಗಲ್ ಪೇ, ಜಿಯೊ ಪೇನಂತಹ ಹಲವು ಪಾವತಿ ಸೌಲಭ್ಯಗಳೂ ಇವೆಯಾದರೂ ಬಳಕೆ ಪ್ರಮಾಣದಲ್ಲಿ ಭಾರಿ ಏರಿಕೆಯೇನೂ ಕಂಡುಬರುತ್ತಿಲ್ಲ.

ತಿಳಿವಳಿಕೆಯ ಕೊರತೆ ಮತ್ತು ಹಣ ಕಳೆದುಕೊಳ್ಳುವ ಭಯದಿಂದ ಮೊಬೈಲ್ ಬಳಸುತ್ತಿರುವವರಲ್ಲಿ ಇಂದಿಗೂ ಬಹಳಷ್ಟು ಮಂದಿ ಮೊಬೈಲ್ ಬ್ಯಾಂಕಿಂಗ್‌ನ ಹತ್ತಿರವೂ ಸುಳಿದಿಲ್ಲ. ಇದೊಂದು ಅತ್ಯಂತ ಸುಲಭವಾದ ಮಾರ್ಗವಾಗಿದೆ. ಹಣ ವರ್ಗಾವಣೆ, ವಿದ್ಯುತ್, ನೀರು, ಮೊಬೈಲ್ ಬಿಲ್ ಪಾವತಿಗೆ ಉಪಯುಕ್ತ. ಸಮಯ ಉಳಿಸುತ್ತದೆ. ಹಾಗಾದರೆ ಇದರಿಂದ ಸಮಸ್ಯೆಯೇ ಇಲ್ಲವೇ ಎಂದರೆ, ಖಂಡಿತವಾಗಿಯೂ ಇದೆ. ಆದರೆ ಇಂಟರ್‌ನೆಟ್ ಬ್ಯಾಂಕಿಂಗ್‌ನಷ್ಟು ಅಪಾಯ ಇಲ್ಲ ಎನ್ನುತ್ತಾರೆ ತಜ್ಞರು.

ಸಕ್ರಿಯಗೊಳಿಸುವುದು ಹೇಗೆ?

ಮೊದಲಿಗೆ ಯಾವುದಾದರೂ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಉಳಿತಾಯ ಖಾತೆ ಇದ್ದರೆ ನೀವು ಬಳಸುವ ಮೊಬೈಲ್ ಸಂಖ್ಯೆಯನ್ನು ಶಾಖೆಯಲ್ಲಿ ನೋಂದಣಿ ಮಾಡಿಸಿ. ಶಾಖೆಯು ಸಮೀಪ ಇರದೇ ಇದ್ದರೆ ಹತ್ತಿರವಿರುವ ಎಟಿಎಂನಲ್ಲಿಯೂ ಮೊಬೈಲ್ ಸಂಖ್ಯೆ ನೋಂದಣಿ ಮಾಡಬಹುದು.ಉದಾಹರಣೆಗೆ: ಎಸ್‌ಬಿಐ ಎಟಿಎಂಗೆ ಹೋಗಿ ಕಾರ್ಡ್ ಹಾಕಿದ ತಕ್ಷಣ ಕಾಣುವ ಆಯ್ಕೆಗಳಲ್ಲಿ Menu ಕ್ಲಿಕ್ ಮಾಡಿ ಎಟಿಎಂ ಪಿನ್ ನೀಡಿ. ಮೊಬೈಲ್ ನಂಬರ್ ರಿಜಿಸ್ಟ್ರೇಷನ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ಬಳಿಕ ಮೊಬೈಲ್ ನಂಬರ್ ಟೈಪ್ ಮಾಡಿ, ಹೀಗೆ ಮತ್ತೊಮ್ಮೆ ನಂಬರ್ ನೀಡಿ ದೃಢೀಕರಿಸಿ. ಆಗ ‘ನೋಂದಣಿ ಯಶಸ್ವಿಯಾಗಿದೆ’ ಎನ್ನುವ ಸಂದೇಶ ಎಟಿಎಂ ಪರದೆಯ ಮೇಲೆ ಬರುತ್ತದೆ. ನಂತರ ನಿಮ್ಮ ಮೊಬೈಲಿಗೂ ಸಂದೇಶ ಬರುತ್ತದೆ.

ಪ್ಲೇ ಸ್ಟೋರ್‌ಗೆ ಹೋಗಿ ಅಲ್ಲಿಂದ ನಿಮ್ಮ ಉಳಿತಾಯ ಖಾತೆ ಇರುವ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಯಾ ಬ್ಯಾಂಕಿಗೆ ಪ್ರತ್ಯೇಕ ಅಪ್ಲಿಕೇಷನ್ ಇರುತ್ತದೆ. ಉದಾಹರಣೆಗೆ ‘ಭಾರತೀಯ ಸ್ಟೇಟ್ ಬ್ಯಾಂಕ್’(ಎಸ್‌ಬಿಐ) ಸಮೂಹದ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ‘ಎಸ್‌ಬಿಐ ಯುನೊ’ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರಯೋಜನಗಳು

ದಿನದ 24 ಗಂಟೆಯೂ ಬಳಕೆಗೆ ಲಭ್ಯ

ತಕ್ಷಣದ ನಗದು ವರ್ಗಾವಣೆ (ಐಎಂಪಿಎಸ್)

ಖಾತೆಯಲ್ಲಿರುವ ಬಾಕಿ ಹಣದ ವಿವರ, ಮಿನಿ ಸ್ಟೇಟ್‌ಮೆಂಟ್, ಪ್ರತಿ ವಹಿವಾಟಿನ ಮಾಹಿತಿ

ಡಿಮ್ಯಾಟ್ ಖಾತೆ ಸೌಲಭ್ಯ

ವಿದ್ಯುತ್, ನೀರು, ಕ್ರೆಡಿಟ್ ಕಾರ್ಡ್ ಶುಲ್ಕ, ವಿಮೆ ಕಂತು ಸೇರಿದಂತೆ ಯುಟಿಲಿಟಿ ಬಿಲ್ ಪಾವತಿ

ಮೊಬೈಲ್, ಡಿಟಿಎಚ್ ರಿಚಾರ್ಜ್

ಹೊಸ ಖಾತೆ ತೆರೆಯಲು, ಡೆಬಿಟ್ ಕಾರ್ಡ್, ಚೆಕ್‌ಬುಕ್‌ಗಾಗಿ ಬೇಡಿಕೆ ಸಲ್ಲಿಕೆ

ಬಸ್, ರೈಲು ಟಿಕೆಟ್ ಬುಕಿಂಗ್, ಸಿನಿಮಾ ಟಿಕೆಟ್ ಖರೀದಿಗೆ

ಎಚ್ಚರಿಕೆ ಅಂಶಗಳು

ಮೊಬೈಲ್ ಬ್ಯಾಂಕಿಂಗ್ ನಡೆಸಲು ನೀಡಲಾಗಿರುವ ‘ಎಂಪಿಐಎನ್’ ಸುರಕ್ಷತೆ ಕಾಪಾಡಿಕೊಳ್ಳಿ

ಮೊಬೈಲ್ ಫೋನ್ ಬಳಕೆಯಲ್ಲಿ ಇಲ್ಲದೇ ಇರುವಾಗ ಪಾಸ್‌ವರ್ಡ್ ಬಳಸಿ ಲಾಕ್ ಮಾಡಿ

ಆ್ಯಪ್ ಸ್ಟೋರ್ ಅಥವಾ ಆಯಾ ಬ್ಯಾಂಕುಗಳ ಅಧಿಕೃತ ವೆಬ್‌ಸೈಟ್‌ನಿಂದಲೇ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಿ

ಮೊಬೈಲ್ ಅಥವಾ ಸಿಮ್ ಕಳೆದುಕೊಂಡರೆ, ಬ್ಯಾಂಕ್ ಶಾಖೆಗೆ ತಕ್ಷಣ ತಿಳಿಸಿ. ಕೂಡಲೇ ನಿಮ್ಮ ಎಂ–ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ

ಎಂ–ಬ್ಯಾಂಕಿಂಗ್ ‘ಯೂಸರ್ ಐಡಿ’ ಮತ್ತು ಪಾಸ್‌ವರ್ಡ್ ಯಾರಿಗೂ ನೀಡಬೇಡಿ

ಎಂ–ಬ್ಯಾಂಕಿಂಗ್ ಸೇವೆಗಾಗಿ ನಿಮ್ಮ ಇ–ಮೇಲ್‌ಗೆ ಬರುವ ಯಾವುದೇಲಿಂಕ್ ಕ್ಲಿಕ್ ಮಾಡಬೇಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.