ನವದೆಹಲಿ: ಮೂನ್ಲೈಟಿಂಗ್ ಮಾಡುತ್ತಿರುವ ಉದ್ಯೋಗಿಗಳ ಆದಾಯಕ್ಕೆ ತೆರಿಗೆ ಬೀಳಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಮೂನ್ಲೈಟಿಂಗ್ನಿಂದ ಹೆಚ್ಚುವರಿ ಆದಾಯ ವ್ಯಕ್ತಿಯ ಕೈ ಸೇರಲಿದೆ. ಈ ಹೆಚ್ಚುವರಿ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.

‘ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತಿಂಗಳಿಗೆ ₹30 ಸಾವಿರಕ್ಕಿಂತ ಅಧಿಕ ವೇತನ ಪಡೆಯುತ್ತಿದ್ದರೆ ಅಥವಾ ವೃತ್ತಿಪರ ಶುಲ್ಕ (Professional Fee) ಪಾವತಿ ಮಾಡುತ್ತಿದ್ದರೆ ಅವರ ಆದಾಯ ಮೇಲೆ ಟಿಡಿಎಸ್ ಕಡಿತಗೊಳ್ಳಲಿದೆ ಎಂದು ತಮಿಳುನಾಡು, ಪುದುಚೇರಿ ಹಾಗೂ ಕೇರಳದ ಪ್ರಧಾನ ಮುಖ್ಯ ತೆರಿಗೆ ಆಯುಕ್ತರಾದ ಆರ್ ರವಿಚಂದ್ರನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪ್ರಶ್ನೋತ್ತರ: 75 ವರ್ಷ ಮೀರಿದ ವ್ಯಕ್ತಿಗಳಿಗೆ ತೆರಿಗೆ ವಿವರ ಸಲ್ಲಿಸಲು ವಿನಾಯಿತಿ

ಹೀಗಾಗಿ ಮೂನ್ಲೈಟಿಂಗ್ ಮಾಡುತ್ತಿರುವ ಉದ್ಯೋಗಿಗಳು ತಾವು ಗಳಿಸುತ್ತಿರುವ ಹೆಚ್ಚುವರಿ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಿದೆ.

ಮೂನ್ಲೈಟಿಂಗ್ ಎಂದರೇನು?

ಒಂದು ಕಂಪನಿಯಲ್ಲಿ ಖಾಯಂ ಉದ್ಯೋಗಿಯಾಗಿದ್ದುಕೊಂಡು, ಇನ್ನೊಂದು ಕಂಪನಿಗೂ ಕೆಲಸ ಮಾಡುವುದನ್ನು ಮೂನ್ಲೈಟಿಂಗ್ ಎನ್ನಲಾಗುತ್ತದೆ. ಅಥವಾ ಏಕಕಾಲದಲ್ಲಿ ಎರಡು ಉದ್ಯೋಗ ಮಾಡಿಕೊಂಡು ಎರಡರಿಂದಲೂ ಆದಾಯ ಪಡೆಯುವುದೇ ಮೂನ್ಲೈಟಿಂಗ್.

ಕೋವಿಡ್ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಿಕೊಳ್ಳಲು ಹಲವು ಮಂದಿ ತಾವು ಕೆಲಸ ಮಾಡುತ್ತಿರುವ ಕಂಪನಿಗೆ ಮಾಹಿತಿ ನೀಡದೆ ಇನ್ನೊಂದು ಕಂಪನಿಗೂ ಕೆಲಸ ಮಾಡುತ್ತಿದ್ದರು. ಇದು ಬೆಳಕಿಗೆ ಬರುತ್ತಿದ್ದಂತೆಯೇ ಹಲವು ಕಂಪನಿಗಳು ಅಂತಹ ಉದ್ಯೋಗಿಗಳನ್ನು ವಜಾ ಮಾಡಿದ್ದವು.

ಇದನ್ನೂ ಓದಿ:ಬಂಡವಾಳ ಮಾರುಕಟ್ಟೆ: ಎಸ್ಐಪಿ ಹೂಡಿಕೆಯ ಐದು ವಿಧಗಳು

ಭಾರತದಲ್ಲಿ ಸ್ವಿಗ್ಗಿ ಕಂಪನಿಯು ಮೂನ್ಲೈಟಿಂಗ್ಗೆ ಅವಕಾಶ ನೀಡಿದ್ದು, ವಿಪ್ರೋ, ಇನ್ಫೊಸಿಸ್ ಮೊದಲಾದ ಕಂಪನಿಗಳು ಕಠುವಾಗಿ ವಿರೋಧಿಸಿವೆ. ಮೂನ್ಲೈಟಿಂಗ್ ಅನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.