ನವದೆಹಲಿ: ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥರಾಗಿ 20 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಕಂಪನಿಯ ಆದಾಯವು 17 ಪಟ್ಟು ಹೆಚ್ಚಾಗಿದೆ, ಲಾಭವು 20 ಪಟ್ಟು ಹೆಚ್ಚಾಗಿದೆ.

ಧೀರೂಭಾಯ್ ಅಂಬಾನಿ ಅವರು 2002ರಲ್ಲಿ ಮೃತಪಟ್ಟ ನಂತರ ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಅವರು ರಿಲಯನ್ಸ್ ಮುಂದಾಳತ್ವವನ್ನು ವಹಿಸಿಕೊಂಡರು. ಕಂಪನಿಯು ವಿಭಜನೆ ಆದ ನಂತರದಲ್ಲಿ ರಿಲಯನ್ಸ್‌ನ ಅನಿಲ, ತೈಲ ಮತ್ತು ಪೆಟ್ರೊಕೆಮಿಕಲ್ಸ್ ವಹಿವಾಟುಗಳು ಮುಕೇಶ್ ಅಂಬಾನಿ ಅವರ ಪಾಲಿಗೆ ಬಂದವು.

20 ವರ್ಷಗಳಲ್ಲಿ ಮುಕೇಶ್ ಒಡೆತನದ ರಿಲಯನ್ಸ್ ಕಂಪನಿಯು ಬೇರೆ ಬೇರೆ ವಹಿವಾಟುಗಳಲ್ಲಿ ವಿಸ್ತರಿಸಿಕೊಂಡಿದೆ. ದೂರಸಂಪರ್ಕ, ಚಿಲ್ಲರೆ ವಹಿವಾಟು, ನವ ಇಂಧನ ವಹಿವಾಟುಗಳನ್ನು ಆರಂಭಿಸಿದೆ.

ಮೋತಿಲಾಲ್ ಓಸ್ವಾಲ್ ಕಂಪನಿ ಸಿದ್ಧಪಡಿಸಿರುವ 26ನೆಯ ವಾರ್ಷಿಕ ಸಂಪತ್ತು ಸೃಷ್ಟಿ ಅಧ್ಯಯನ ವರದಿ ಪ್ರಕಾರ, ರಿಲಯನ್ಸ್ ಕಂಪನಿಯು 2016ರಿಂದ 2021ರ ನಡುವಿನ ಅವಧಿಯಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಸಂಪತ್ತು ಸೃಷ್ಟಿಸಿದೆ. ಕಂಪನಿ ಸೃಷ್ಟಿಸಿರುವ ಸಂಪತ್ತಿನ ಮೊತ್ತ ಸರಿಸುಮಾರು ₹ 10 ಲಕ್ಷ ಕೋಟಿ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.