ನವದೆಹಲಿ: ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ 11ನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ಮುಕೇಶ್ ಅವರು ಒಟ್ಟಾರೆ₹ 3.45 ಲಕ್ಷ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಈ ವರ್ಷದಲ್ಲಿ ಅವರ ಸಂಪತ್ತು ಮೌಲ್ಯದಲ್ಲಿ ಗರಿಷ್ಠ ಗಳಿಕೆಯನ್ನೂ ಅವರು ಸಾಧಿಸಿದ್ದಾರೆ.₹ 67,890 ಕೋಟಿಯಷ್ಟು ಹೆಚ್ಚಾಗಿದೆ.ರಿಲಯನ್ಸ್ ಜಿಯೊ ಬ್ರಾಡ್‌ಬ್ಯಾಂಡ್ ಟೆಲಿಕಾಂ ಸರ್ವೀಸಸ್‌ನ ಯಶಸ್ಸಿನಿಂದಾಗಿ ಇದು ಸಾಧ್ಯವಾಗಿದೆ ಎಂದು ಫೋರ್ಬ್ಸ್ ವಿಶ್ಲೇಷಣೆ ಮಾಡಿದೆ.

ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಅವರ ಆಸ್ತಿ ಮೌಲ್ಯ ₹ 1.53 ಲಕ್ಷ ಕೋಟಿಗಳಷ್ಟಿದೆ. ಆರ್ಸೆಲರ್ ಮಿತ್ತಲ್ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಅವರು ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಐದನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಆಸ್ತಿ ಮೌಲ್ಯ ₹1.21 ಲಕ್ಷ ಕೋಟಿಗಳಷ್ಟಿದೆ.ಸನ್ ಫಾರ್ಮಾದ ಮುಖ್ಯಸ್ಥ ದಿಲೀಪ್ ಸಾಂಘ್ವಿ ಅವರು ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

100ರಲ್ಲಿ 11 ಸಿರಿವಂತರ ಸಂಪತ್ತು ₹ 7,300 ಕೋಟಿ ಅಥವಾ ಅದಕ್ಕೂ ಹೆಚ್ಚು ಏರಿಕೆಯಾಗಿದೆ.

ಏಕೈಕ ಮಹಿಳೆ: ಸಿರಿವಂತ ಪಟ್ಟಿಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಮ್‌ದಾರ್ ಷಾ ಅವರು ಮಾತ್ರವೇ ಸ್ಥಾನ (39ನೇ) ಪಡೆದಿದ್ದಾರೆ. ಅವರ ಸಂಪತ್ತು ಮೌಲ್ಯ ಶೇ 66.7 ರಷ್ಟು ಹೆಚ್ಚಾಗಿದ್ದು, ₹ 26,280 ಕೋಟಿಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.