ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಮ್ಯೂಚುವಲ್ ಫಂಡ್ ಸಂಸ್ಥೆಗಳ ಸಂಪತ್ತು ನಿರ್ವಹಣಾ ಮೊತ್ತವು ಶೇ 35ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.

ಈ ಅವಧಿಯಲ್ಲಿ ₹14 ಲಕ್ಷ ಕೋಟಿ ಸೇರ್ಪಡೆಯಾಗಿದ್ದು, ಒಟ್ಟು ಸಂಪತ್ತು ₹53.40 ಲಕ್ಷ ಕೋಟಿಗೆ ತಲುಪಿದೆ. ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಚಿಲ್ಲರೆ ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳಲ್ಲಿ ಬಂಡವಾಳ ತೊಡಗಿಸುವುದು ಹೆಚ್ಚಿದೆ. ಹಾಗಾಗಿ, ಸಂಪತ್ತು ಹೆಚ್ಚಳವಾಗಿದೆ ಎಂದು ಹೇಳಿದೆ.

2022–23ರಲ್ಲಿ ಒಟ್ಟು ಸಂಪತ್ತು ₹39.42 ಲಕ್ಷ ಕೋಟಿ ಆಗಿತ್ತು. 2020–21ನೇ ಆರ್ಥಿಕ ವರ್ಷದ ಬಳಿಕ ಮ್ಯೂಚುವಲ್ ಫಂಡ್ ವಲಯದ ಬೆಳವಣಿಗೆಯು ಶೇ 41ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ವ್ಯವಸ್ಥಿತ ಹೂಡಿಕೆ ಯೋಜನೆಯಡಿ ಮ್ಯೂಚುವಲ್ ಫಂಡ್‌ಗಳಲ್ಲಿ ತಿಂಗಳವಾರು ಹೂಡಿಕೆ ಮೊತ್ತವು ಏರಿಕೆಯಾಗುತ್ತಿದೆ. ಮಾರ್ಚ್‌ನಲ್ಲಿ ₹19,300 ಕೋಟಿ ಒಳಹರಿವು ಬಂದಿದೆ. 2023–24ರಲ್ಲಿ ಎಸ್‌ಐಪಿ ಮೂಲಕ ₹2 ಲಕ್ಷ ಕೋಟಿಯಷ್ಟು ಹೂಡಿಕೆಯಾಗಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.