ನವದೆಹಲಿ: ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಫೆಬ್ರುವರಿಯಲ್ಲಿ ದಾಖಲೆ ಮಟ್ಟಕ್ಕೆ ತಲುಪಿದೆ. ಫೆಬ್ರುವರಿಯಲ್ಲಿ ರಷ್ಯಾದಿಂದ ಪ್ರತಿ ದಿನ 16 ಲಕ್ಷ ಬ್ಯಾರಲ್ ತೈಲ ಆಮದಾಗಿದೆ. ಭಾರತಕ್ಕೆ ಇರಾಕ್ ಮತ್ತು ಸೌದಿ ಅರೇಬಿಯಾ ದೇಶಗಳಿಂದ ಆಗುತ್ತಿರುವ ಒಟ್ಟು ಆಮದು ಪ್ರಮಾಣಕ್ಕಿಂತ ಇದು ಹೆಚ್ಚಿನದ್ದಾಗಿದೆ.

ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಪೂರೈಸುವ ದೇಶಗಳ ಸಾಲಿನಲ್ಲಿ ರಷ್ಯಾ ಸತತ ಐದನೇ ತಿಂಗಳಿನಲ್ಲಿಯೂ ಮೊದಲ ಸ್ಥಾನದಲ್ಲಿದೆ. ಭಾರತವು ಆಮದು ಮಾಡಿಕೊಳ್ಳುತ್ತಿರುವ ತೈಲದ ಮೂರನೇ ಒಂದರಷ್ಟು ಪಾಲನ್ನು ರಷ್ಯಾ ನೀಡುತ್ತಿದೆ.

2022ರ ಫೆಬ್ರುವರಿಯಲ್ಲಿ ರಷ್ಯಾ–ಉಕ್ರೇನ್ ಸಂಘರ್ಷ ಆರಂಭ ಆಗುವುದಕ್ಕೂ ಮೊದಲು ಭಾರತವು ಮಾಡಿಕೊಳ್ಳುತ್ತಿದ್ದ ಒಟ್ಟಾರೆ ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇ 1ಕ್ಕಿಂತ ಕಡಿಮೆ ಇತ್ತು. ಆದರೆ ಈಗ ಶೇಕಡ 35ಕ್ಕೆ ಏರಿಕೆ ಕಂಡಿದೆ. ರಷ್ಯಾವು ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಪೂರೈಕೆ ಮಾಡುತ್ತಿದೆ.

ಸೌದಿ ಅರೇಬಿಯಾದಿಂದ ಆಮದಾಗುವ ತೈಲದ ಪ್ರಮಾಣ ಶೇ 16ರಷ್ಟು ಮತ್ತು ಅಮೆರಿಕದಿಂದ ಪೂರೈಕೆ ಆಗುವ ತೈಲದ ಪ್ರಮಾಣ ಶೇ 38ರಷ್ಟು ಕಡಿಮೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.