ದುಬೈ/ಲಂಡನ್:ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳ (ಒಪೆಕ್+) ಪ್ರತಿನಿಧಿಗಳು ಬುಧವಾರ ಸಭೆ ಸೇರಲಿದ್ದು, ತೈಲ ಉತ್ಪಾದನೆ ನೀತಿಯಲ್ಲಿ ಬದಲಾವಣೆ ಮಾಡದಿರುವ ಸಾಧ್ಯತೆ ಇದೆ. ಈಗಾಗಲೆ ನಿರ್ಧರಿಸಿರುವಂತೆ ಉತ್ಪಾದನೆಯನ್ನು ಅಲ್ಪ ಮಟ್ಟಿಗೆ ಹೆಚ್ಚಿಸುವುದನ್ನು ಮುಂದುವರಿಸಲಿವೆ ಎಂದು ಮೂಲಗಳು ಹೇಳಿವೆ.

ಮುಂದಿನ ಹಲವು ತಿಂಗಳುಗಳವರೆಗೆ ಕಚ್ಚಾ ತೈಲ ಉತ್ಪಾದನೆಯನ್ನು ಪ್ರತಿ ದಿನ 4 ಲಕ್ಷ ಬ್ಯಾರಲ್‌ಗಳಷ್ಟು ಹೆಚ್ಚಿಸಲು ಒಪೆಕ್+ ದೇಶಗಳು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಈ ಕುರಿತು ಚರ್ಚೆ ನಡೆಸಲು ಬುಧವಾರ ಸಭೆ ಸೇರಲಿವೆ.

ತೈಲ ಬೆಲೆ ಹೆಚ್ಚಾಗುತ್ತಿದ್ದು, ಅದರಿಂದ ಜಾಗತಿಕ ಆರ್ಥಿಕ ಚೇತರಿಕೆಗೆ ಅಡ್ಡಿಯಾಗಲಿದೆ. ಹೀಗಾಗಿ ಉತ್ಪಾದನೆ ಹೆಚ್ಚಿಸುವಂತೆ ಅಮೆರಿಕವು ಒಪೆಕ್‌ಗೆ ಮನವಿ ಮಾಡಿದೆ. ಆದರೆ, ಒಪೆಕ್+ ಮೂಲಗಳ ಪ್ರಕಾರ, ಸದ್ಯದ ಬೆಲೆ ಏರಿಕೆಯು ತಾತ್ಕಾಲಿಕವಾಗಿದ್ದು, ಮೆಕ್ಸಿಕೊದಲ್ಲಿನ ಪೂರೈಕೆ ಸಮಸ್ಯೆ ಹಾಗೂ ಅಮೆರಿಕದ ಗಲ್ಫ್ ಕರಾವಳಿಯಲ್ಲಿ ವಾರಾಂತ್ಯದಲ್ಲಿ ಬೀಸಿದ ಭಾರಿ ಚಂಡಮಾರುತದಿಂದಾಗಿ ಬೆಲೆ ಏರಿಕೆ ಆಗಿದೆ.

ಸದ್ಯ ತೈಲ ಬೆಲೆಯು ಬ್ಯಾರಲ್‌ಗೆ 70 ಡಾಲರ್ ಆಸುಪಾಸಿನಲ್ಲಿ ಇದೆ. ದಿನಕ್ಕೆ 4 ಲಕ್ಷ ಬ್ಯಾರಲ್‌ಗಳಷ್ಟು ಉತ್ಪಾದನೆ ಹೆಚ್ಚಿಸುವ ಯೋಜನೆಯಂತೆಯೇ ಒಪಕ್+ ಮುಂದುವರಿಯಲಿದೆ ಎಂದು ಮೂಲವೊಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.