ಮುಂಬೈ: ಓಯೊ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮತ್ತು ಅವರ ಪತ್ನಿ ಗೀತಾಂಶ ಸೂದ್, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ರಿತೇಶ್, ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

‘ಗೀತಾಳನ್ನು ಹನ್ನೊಂದು ವರ್ಷದ ಹಿಂದೆ ಭೇಟಿಯಾಗಿದ್ದೆ. ಬ್ಯುಸಿನೆಸ್ ಮಾಡಬೇಕೆಂಬ ನನ್ನ ಗುರಿಗೆ ಬೆನ್ನೆಲುಬಾಗಿ ನಿಂತಿದ್ದಳು ಆಕೆ. ಈ ವರ್ಷ ನಾವು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವು. ಇದು ನನ್ನ ಜೀವನದ ಅತ್ಯಂತ ಖುಷಿಯ ಕ್ಷಣವಾಗಿತ್ತು. ಇದೀಗ ನಾವು ಹೊಸ ಬದುಕಿಗೆ ಕಾಲಿಡುತ್ತಿದ್ದೇವೆ. ಈ ಖುಷಿ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ’ ಎಂದು ಹೇಳಿದರು.

ಮಾರವಾಡಿ ಕುಟುಂಬದ ಹಿನ್ನೆಲೆ ಹೊಂದಿರುವ ಒಡಿಶಾದ ರಿತೇಶ್ ಅಗರವಾಲ್, 2013 ರಲ್ಲಿ ಓಯೊ ಕಂಪನಿ ಸ್ಥಾಪಿಸಿದ್ದಾರೆ. ‘ಓಯೊ ಹೋಟೆಲ್ ಮತ್ತು ರೂಮ್ಸ್’ ಹೆಸರಿನಲ್ಲಿ ಇದು ವ್ಯವಹಾರ ಮಾಡುತ್ತಿದ್ದು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಭಾರತವೂ ಸೇರಿದಂತೆ, ಅಮೆರಿಕ, ನೇಪಾಳ, ಯುಎಇ, ಚೀನಾ, ಮಲೇಷಿಯಾ, ಇಂಡೋನೇಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸೇವೆ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.