ನವದೆಹಲಿ: ಓಯೊ ಕಂಪನಿಯು 600 ಜನರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಇದೇ ವೇಳೆ ನಿರ್ವಹಣಾ ತಂಡಕ್ಕೆ ಹೊಸದಾಗಿ 250 ಜನರನ್ನು ನೇಮಿಸಿಕೊಳ್ಳುವುದಾಗಿಯೂ ತಿಳಿಸಿದೆ.

ಸದ್ಯ ಕಂಪನಿಯಲ್ಲಿ ಒಟ್ಟು 3,700 ಸಿಬ್ಬಂದಿ ಇದ್ದು, ಉದ್ಯೋಗ ಕಡಿತ ಮತ್ತು ಹೊಸ ನೇಮಕಾತಿಯನ್ನೂ ಒಳಗೊಂಡು ಒಟ್ಟಾರೆ ಸಿಬ್ಬಂದಿ ಕಡಿತವು ಶೇ 10ರಷ್ಟು ಆಗಲಿದೆ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ತನ್ನ ಸಾಂಸ್ಥಿಕ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದ್ದು, ಈ ಉದ್ಯೋಗ ಕಡಿತವು ಅದರ ಒಂದು ಭಾಗವಾಗಿದೆ. ಉತ್ಪನ್ನ ಮತ್ತು ಎಂಜಿನಿಯರಿಂಗ್, ಕಾರ್ಪೊರೇಟ್ ಕಚೇರಿಗಳು ಮತ್ತು ಓಯೊ ವಕೇಷನ್ ಹೋಮ್ಸ್ ಟೀಮ್ಸ್‌ನಲ್ಲಿ ಸಿಬ್ಬಂದಿ ಸಂಖ್ಯೆ ತಗ್ಗಿಸಲು ಹಾಗೂ ಪಾಲುದಾರರ ಸಂಬಂಧ ನಿರ್ವಹಣೆ ಮತ್ತು ವಹಿವಾಟು ಅಭಿವೃದ್ಧಿ ತಂಡಗಳಿಗೆ ಹೆಚ್ಚಿನ ಜನರನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಕಾರ್ಯಾಚರಣೆಯನ್ನು ಸುಗಮಗೊಳಿಸಲು ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ವಿಲೀನಗೋಳಿಸಲಾಗುವುದು ಎಂದು ಅದು ಹೇಳಿದೆ. ಗ್ರಾಹಕರು ಮತ್ತು ಪಾಲುದಾರರನ್ನು ತೃಪ್ತಿಪಡಿಸಲು ಹಾಗೂ ತನ್ನ ವೇದಿಕೆಯಲ್ಲಿ ಹೋಟೆಲ್ ಮತ್ತು ಹೋಮ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುವಂತೆ ವಹಿವಾಟು ಅಭಿವೃದ್ಧಿ ತಂಡವನ್ನು ಬಲಪಡಿಸಲು 250 ಜನರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.