ಬೆಂಗಳೂರು: ನಿಮ್ಮ ಶಾಶ್ವತ ಖಾತೆ ಸಂಖ್ಯೆಗೆ (ಪ್ಯಾನ್) ಆಧಾರ್ ಸಂಖ್ಯೆಯನ್ನು ಜೋಡಿಸುವಂತೆಆದಾಯ ತೆರಿಗೆ ಇಲಾಖೆಯು ಸೂಚನೆ ನೀಡಿದೆ.ಯಾವುದೇ ಅಡೆತಡೆ ಇಲ್ಲದೆ ಆದಾಯ ತೆರಿಗೆಯ ಸೇವೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲುಮಾರ್ಚ್ 31ರ ಒಳಗಾಗಿ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಜೋಡಿಸುವಂತೆ ಸೂಚನೆ ನೀಡಿದೆ.

2020ರ ಮಾರ್ಚ್31ರೊಳಗೆ ಎರಡೂ ಕಾರ್ಡ್‌ಗಳ ಲಿಂಕ್ ಆಗದಿದ್ದರೆ ಪ್ಯಾನ್ ನಿಷ್ಕ್ರಿಯಗೊಳ್ಳಲಿದೆ.ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ಆಧಾರ್ ಸಂಖ್ಯೆ ನಮೂದಿಸಿಯೇ ಮುಂದುವರಿಯಬೇಕು.

ಆದಾಯ ತೆರಿಗೆ ಪಾವತಿದಾರರು ‘ಪ್ಯಾನ್’ಗೆಆಧಾರ್ ಜೋಡಿಸುವುದು ಆದಾಯ ತೆರಿಗೆ ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ.ಈ ಪ್ರಕ್ರಿಯೆಗೆ ಇದುವರೆಗೆ ಒಟ್ಟಾರೆ ಎಂಟುಬಾರಿ ಗಡುವು ವಿಸ್ತರಣೆ ಮಾಡಲಾಗಿದೆ.

ಇದನ್ನೂ ಓದಿ:ಮಾಸಾಶನ ಪಡೆಯಲು ಆಧಾರ್ ಕಡ್ಡಾಯ

ನಮ್ಮಲ್ಲಿರುವ ಎರಡೂ ಕಾರ್ಡ್‌ಗಳ ಜೋಡಣೆ ಅಥವಾ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ವಿವರ–

ಹಂತ 1:ತೆರಿಗೆ ಇಲಾಖೆಯ ಇ–ಫಿಲ್ಲಿಂಗ್ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಬೇಕು

ವೆಬ್‌ಸೈಟ್ ಲಿಂಕ್:https://www.incometaxindiaefiling.gov.in/home

ಹಂತ 2: ಪೋರ್ಟಲ್‌ನಲ್ಲಿ ಪ್ಯಾನ್–ಆಧಾರ್ ಲಿಂಕ್ ಆಯ್ಕೆಯನ್ನು ಕಂಡುಕೊಂಡು ಅದರ ಮೇಲೆ ಕ್ಲಿಕ್ ಮಾಡಬೇಕು

ಹಂತ 3: ನಿಗದಿತ ಸ್ಥಳದಲ್ಲಿ ಪಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಬೇಕು

ಹಂತ 4: ಆಧಾರ್‌ನಲ್ಲಿ ಇರುವಂತೆ ಹೆಸರು ನಮೂದಿಸಬೇಕು

ಹಂತ 5: ನಿಮ್ಮ ಆಧಾರ್ ಕಾರ್ಡ್‌ನ ಜನ್ಮದಿನಾಂಕದ ವಿವರದಲ್ಲಿ ಕೇವಲ ಹುಟ್ಟಿದ ವರ್ಷ ಮಾತ್ರ ದಾಖಲಾಗಿದ್ದರೆ;'I have the only year of birth in Aadhar card' ಆಯ್ಕೆ ಕ್ಲಿಕ್ಕಿಸಬೇಕು

ಇದನ್ನೂ ಓದಿ:ಆಧಾರ್ ತೀರ್ಪು: ಸುಪ್ರಿಂಕೋರ್ಟ್ ಅಂತಿಮ ತೀರ್ಪಿನಲ್ಲಿ ಹೇಳಿದ್ದೇನು

ಹಂತ 6: ಸರಿಯಾದ ವಿವರ ನೀಡಿರುವುದನ್ನು ಖಾತ್ರಿ ಪಡಿಸಿಕೊಂಡು ಮುಂದುವರಿಯಲು 'I agree to validate my Aadhar details with UIDAI' ಆಯ್ಕೆ ಕ್ಲಿಕ್ ಮಾಡಬೇಕು

ಹಂತ 7: ಪರದೆಯಲ್ಲಿ ಕಾಣಿಸುವ ವಿಶೇಷ ಕೋಡ್ (captcha code) ನಮೂದಿಸಬೇಕು

ಹಂತ 8: ಅಂತಿಮವಾಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮನವಿಗಾಗಿ'Link Aadhaar' ಆಯ್ಕೆ ಕ್ಲಿಕ್ ಮಾಡಬೇಕು. ಇಲ್ಲಿಗೆ ಕಾರ್ಡ್‌ಗಳ ಲಿಂಕ್‌ಗಾಗಿ ಮನವಿ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ:ಪ್ಯಾನ್–ಆಧಾರ್ ಜೋಡಣೆಗೆ ಡಿ.31ರ ಗಡುವು: ಐಟಿ ಇಲಾಖೆ

ಗಮನಿಸಿ:ಪಾನ್–ಆಧಾರ್ ಲಿಂಕ್ ಆಗಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಲ್ಲಿಯೇ ಖಾತ್ರಿ ಪಡಿಸಿಕೊಳ್ಳಬಹುದು. ಈಗಾಗಲೇ ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದರೆ, ನಿಮ್ಮ ಪ್ಯಾನ್–ಆಧಾರ್ ಲಿಂಕ್ ಆಗಿರುತ್ತದೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ಮೇಲೆ ತಿಳಿಸಿದಂತೆ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ವಿವರ ಭರ್ತಿ ಮಾಡಿ ಗಮನಿಸಿ. ಕಾರ್ಡ್‌ಗಳು ಲಿಂಕ್ ಆಗಿದ್ದರೆಕೊನೆಯ ಹಂತದ ನಂತರ,‘Your Pan is already linked....' ಎಂದು ತೋರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.