ಬೆಂಗಳೂರು: ಗ್ರೂಪ್ಎಂ ಮೀಡಿಯಾ (ಇಂಡಿಯಾ) ಪ್ರೈ. ಲಿಮಿಟೆಡ್ನ ದಕ್ಷಿಣ ಏಷ್ಯಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪ್ರಶಾಂತ್ ಕುಮಾರ್ ಅವರು ಭಾರತೀಯ ಜಾಹೀರಾತು ಏಜೆನ್ಸಿಗಳ ಒಕ್ಕೂಟದ (ಎಎಎಐ) 2024–25ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಮುಂಬೈನಲ್ಲಿ ನಡೆದ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಕುಮಾರ್ ಅವರ ಆಯ್ಕೆ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ. ಹವಸ್ ಇಂಡಿಯಾದ ಗ್ರೂಪ್ ಸಿಇಒ ರಾಣಾ ಬರುವಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2022–23ನೇ ಸಾಲಿನಲ್ಲೂ ಪ್ರಶಾಂತ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ನಿಕಟಪೂರ್ವ ಅಧ್ಯಕ್ಷೆ, ಅನುಪ್ರಿಯಾ ಆಚಾರ್ಯ ಅವರು ಇದೇ ಅವಧಿಗೆ ಮಂಡಳಿಯ ಪದನಿಮಿತ್ತ ಸದಸ್ಯೆಯಾಗಿದ್ದಾರೆ.

ಸದಸ್ಯರಾಗಿ ಮ್ಯಾಡಿಸನ್ ಕಮ್ಯುನಿಕೇಷನ್ನ ಸ್ಯಾಮ್ ಬಲ್ಸಾರಾ, ಎವರೆಸ್ಟ್ ಬ್ರ್ಯಾಂಡ್ ಸಲ್ಯೂಷನ್ಸ್ನ ತಾನ್ಯಾ ಗೋಯಲ್, ಬಿಇಐ ಕನ್ಫ್ಲೂಯೆನ್ಸ್ ಕಮ್ಯುನಿಕೇಷನ್ನ ತಪಸ್ ಗುಪ್ತಾ, ಮ್ಯಾಟ್ರಿಕ್ಸ್ ಪಬ್ಲಿಸಿಟೀಸ್ ಆ್ಯಂಡ್ ಮೀಡಿಯಾ ಇಂಡಿಯಾದ ವಿಶಾಂದಾಸ್ ಹರ್ದಸಾನಿ, ಹವಸ್ ಮೀಡಿಯಾ ಇಂಡಿಯಾದ ಮೋಹಿತ್ ಜೋಶಿ, ಇನೋಸಿಯನ್ ವರ್ಲ್ಡ್ವೈಡ್ ಕಮ್ಯುನಿಕೇಷನ್ನ ಸಂತೋಷ್ಕುಮಾರ್, ಕ್ರಯೋನ್ಸ್ ಅಡ್ವರ್ಟೈಸಿಂಗ್ನ ಕುನಾಲ್ ಲಲಾನಿ, ಕಿನೆಕ್ಟ್ನ ರೋಹನ್ ಮೆಹ್ತಾ, ಕೊಚ್ಚಿನ್ನ ಮೈತ್ರಿ ಅಡ್ವರ್ಟೈಸಿಂಗ್ ವಕ್ಸ್ನ ಚಂದ್ರಮೌಳಿ ಮುತ್ತು ಪ್ಲಾಟಿನಂ ಅಡ್ವರ್ಟೈಸಿಂಗ್ನ ವಿಕ್ರಮ್ ಸಖುಜಾ, ಸ್ಟ್ಯಾಂಡರ್ಡ್ ಪಬ್ಲಿಸಿಟಿಯ ಕಲ್ಯಾಣ್ ಸರ್ಕಾರ್ ಮತ್ತು ಹೈದರಾಬಾದ್ನ ಶ್ಲೋಕ ಅಡ್ವರ್ಟೈಸಿಂಗ್ನ ಕೆ.ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.