ಚೆನ್ನೈ: ಜನಪ್ರಿಯ ಕಾಟನ್ ಬಟ್ಟೆಗಳ ಕಂಪನಿ ರಾಮ್ರಾಜ್ಗೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕಂಪನಿ, ‘ಸಾಂಪ್ರದಾಯಿಕ ಉಡುಗೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದೊಂದಿಗೆ ಶೀಘ್ರದಲ್ಲೇ ಬಹುಮಾಧ್ಯಮ ಪ್ರಚಾರ ಆರಂಭಿಸಲಿದ್ದೇವೆ. ಅಭಿಷೇಕ್ ಅವರು ರಾಮ್ರಾಜ್ನ ದೋತಿ, ಕುರ್ತಾ, ಶರ್ಟ್ ಸೇರಿದಂತೆ ವಿವಿಧ ವಿನ್ಯಾಸದ ಬಟ್ಟೆಗಳಿಗೆ ಪ್ರತಿನಿಧಿಯಾಗಲಿದ್ದಾರೆ’ ಎಂದು ಹೇಳಿದೆ.

360 ಡಿಗ್ರಿ ಪ್ರಚಾರ ಅಂದರೆ ವಿವಿಧ ಮಾಧ್ಯಮಗಳಲ್ಲಿ ಅಭಿಷೇಕ್ ಅವರ ಮೂಲಕ ರಾಮ್ರಾಜ್ ಉತ್ಪನ್ನಗಳನ್ನು ಪ್ರಚಾರ ಮಾಡಲು ಕಂಪನಿ ಯೋಜಿಸಿದೆ.

‘ಅಭಿಷೇಕ್ ಅವರಿಗೆ ರಾಮರಾಜ್ ಕುಟುಂಬಕ್ಕೆ ಸ್ವಾಗತ. ಅವರು ಜನರೊಂದಿಗೆ ಹೊಂದಿರುವ ಸಂಬಂಧವು ನಮ್ಮ ಉತ್ಪನ್ನಗಳನ್ನು ಜನರಿಗೆ ತಲುಪಿಸುವಂತೆ ಮಾಡಲಿದೆ. ಭಾರತದ ಪಾರಂಪರಿಕ ಕಾಟನ್ ಬಟ್ಟೆಯನ್ನು ಜನರಿಗೆ ತಲುಪಿಸುವುದು ನಮ್ಮ ಗುರಿಯಾಗಿದೆ’ ಎಂದು ಕಂಪನಿ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಟ ಅಭಿಷೇಕ್, ‘ಭಾರತದ ಸಾಂಪ್ರದಾಯಿಕ ಉಡುಗೆಗಳಿಗೆ ಪ್ರತಿನಿಧಿಯಾಗಲು ಉತ್ಸುಕನಾಗಿದ್ದೇನೆ. ಆಧುನಿಕ ಭಾರತದಲ್ಲಿ ಪ್ರತಿದಿನವೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವಂತೆ ಮಾಡಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.