ಬೆಂಗಳೂರು: ರಿಲಯನ್ಸ್ ಫೌಂಡೇಷನ್‌ನಿಂದ 2024-25ನೇ ಶೈಕ್ಷಣಿಕ ಸಾಲಿನಡಿ ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಯುವಜನರ ಸಬಲೀಕರಣ ಹಾಗೂ ಆರ್ಥಿಕ ಹೊರೆಯಿಲ್ಲದೆ ತಮ್ಮ ಅಧ್ಯಯನ ಮುಂದುವರಿಸಲು ಅನುಕೂಲವಾಗುವಂತೆ ಈ ಯೋಜನೆ ರೂಪಿಸಲಾಗಿದೆ ಎಂದು ಫೌಂಡೇಶನ್ ತಿಳಿಸಿದೆ.

ನವಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವ, ಭವಿಷ್ಯಕ್ಕೆ ಉಪಯುಕ್ತವಾದ ಎಂಜಿನಿಯರಿಂಗ್, ತಂತ್ರಜ್ಞಾನ, ಇಂಧನ ಹಾಗೂ ಜೀವ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿರುವ 100 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಪದವಿ ಕಾಲೇಜು ಶಿಕ್ಷಣಕ್ಕಾಗಿ ಅಂಕ ಹಾಗೂ ವಿದ್ಯಾರ್ಥಿಯ ಆರ್ಥಿಕ ಸ್ಥಿತಿಯ ಮಾನದಂಡ ಆಧಾರದ ಮೇಲೆ 5 ಸಾವಿರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಪದವಿ ವಿದ್ಯಾರ್ಥಿಗಳಿಗೆ ₹2 ಲಕ್ಷ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ₹6 ಲಕ್ಷ ವಿದ್ಯಾರ್ಥಿ ವೇತನ ದೊರೆಯಲಿದೆ.

ವಿದ್ಯಾರ್ಥಿಗಳು www.scholarships.reliancefoundation.org ಈ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಪದವಿ ವಿದ್ಯಾರ್ಥಿಗೆ ಅರ್ಹತೆ ಮತ್ತು ಆರ್ಥಿಕ ಹಿನ್ನೆಲೆಯ ಮೌಲ್ಯಮಾಪನವನ್ನು ಒಳಗೊಂಡಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವೇತನಕ್ಕಾಗಿ ಶೈಕ್ಷಣಿಕ ಸಾಧನೆ, ವೈಯಕ್ತಿಕ ಹೇಳಿಕೆ ಮತ್ತು ಸಂದರ್ಶನವನ್ನು ಆಧರಿಸಿದೆ ಎಂದು ತಿಳಿಸಿದೆ.

ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 6 ಅಂತಿಮ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.