ಬೆಂಗಳೂರು: ‘ಮುಂದಿನ ಐದು ವರ್ಷಗಳಲ್ಲಿ ₹ 1,390 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ನಾವಿನ್ಯತಾ ಕೇಂದ್ರ ಸ್ಥಾಪಿಸಲಾಗುವುದು’ ಎಂದು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದ ಸಿಮನ್ಸ್ ಹೆಲ್ತಿನರ್ಸ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಪೀಟರ್ ಶೆರ್ಡಟ್ ತಿಳಿಸಿದರು.

‘ಭಾರತದ ಮಾರುಕಟ್ಟೆಯು ಕಂಪನಿಯ ಬೆಳವಣಿಗೆಗೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತಿದೆ. ಹೀಗಾಗಿ 2025ರ ಕಾರ್ಯತಂತ್ರದ ಒಂದು ಭಾಗವಾಗಿ ಈ ಹೂಡಿಕೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ಹಾಲಿ ಇರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ಅಲ್ಟ್ರಾ ಮಾಡರ್ನ್ಸ್ ಮೆಡಿಕಲ್ ಇಮೇಜಿಂಗ್ ಫ್ಯಾಕ್ಟರಿಯ ಬಳಿಯೇ ಈ ನಾವಿನ್ಯತಾ ಕೇಂದ್ರ ನಿರ್ಮಾಣವಾಗಲಿದೆ.

ಅಮೆರಿಕ, ಜರ್ಮನಿ ಮತ್ತು ಚೀನಾದ ನಂತರ ನಾಲ್ಕನೆಯ ನಾವಿನ್ಯತಾ ಕೇಂದ್ರ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಇದರಲ್ಲಿ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಆಗ್ಮೆಂಟೆಡ್ & ವರ್ಚುವಲ್ ರಿಯಾಲಿಟಿ, ಸೈಬರ್ ಸೆಕ್ಯುರಿಟಿ ಕೇಂದ್ರಗಳು ಇರಲಿವೆ ಎಂದು ಕಂಪನಿ ತಿಳಿಸಿದೆ.

ಕಂಪನಿಯು ಉತ್ಪನ್ನಗಳಿಗೆ ಭಾರತವನ್ನು ತಯಾರಿಕಾ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿಯೂ ಈ ಹೂಡಿಕೆ ಗಮನ ಹರಿಸಲಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.