ನವದೆಹಲಿ: ಮಕ್ಕಳ ಭವಿಷ್ಯಕ್ಕೆ ಪೋಷಕರೇ ಪಿಂಚಣಿ ಖಾತೆ ತೆರೆದು ಹಣ ಉಳಿತಾಯ ಮಾಡುವ ‘ಎನ್‌ಪಿಎಸ್–ವಾತ್ಸಲ್ಯ’ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬುಧವಾರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಜುಲೈನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು.

ಹಾಲಿ ಇರುವ ಎನ್‌ಪಿಎಸ್ ಅನ್ನು ಈಗ ಮಕ್ಕಳಿಗೂ ವಿಸ್ತರಿಸಲಾಗಿದೆ. ಕಳೆದ ಹತ್ತು ವರ್ಷದ ಅವಧಿಯಲ್ಲಿ ಎನ್‌ಪಿಎಸ್‌ನಡಿ 1.86 ಕೋಟಿ ಚಂದಾದಾರರಾಗಿದ್ದಾರೆ. ಇದರ ಒಟ್ಟು ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹13 ಲಕ್ಷ ಕೋಟಿ ಆಗಿದೆ.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಈ ಯೋಜನೆಯನ್ನು ನಿರ್ವಹಣೆ ಮಾಡಲಿದೆ. ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಸೇರಿ ಹಲವು ಬ್ಯಾಂಕ್‌ಗಳು ಈ ಯೋಜನೆಯ ಯಶಸ್ವಿಗಾಗಿ ಪ್ರಾಧಿಕಾರದ ಜೊತೆಗೆ ಕೈಜೋಡಿಸಿವೆ.

ಮುಂಬೈನಲ್ಲಿರುವ ಐಸಿಐಸಿಐ ಬ್ಯಾಂಕ್‌ನ ಕಚೇರಿಯಲ್ಲಿ ಮಕ್ಕಳ ಖಾತೆ ತೆರೆಯಲಾಯಿತು. ಚಂದಾದಾರರಾದ ಮಕ್ಕಳಿಗೆ ಹೊಸದಾಗಿ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (ಪಿಆರ್‌ಎಎನ್) ನೀಡಲಾಯಿತು.

ಉತ್ತಮ ಆಯ್ಕೆ:

ಚಾಲನೆ ನೀಡಿದ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್, ‘ರಾಷ್ಟ್ರೀಯ ಪಿಂಚಣಿ ಯೋಜನೆಯು (ಎನ್‌ಪಿಎಸ್) ಹೂಡಿಕೆದಾರರಿಗೆ ಒಳ್ಳೆಯ ಲಾಭ ತಂದುಕೊಡಲಿದೆ. ಅಲ್ಲದೆ, ಜನರು ಭವಿಷ್ಯಕ್ಕಾಗಿ ಹಣ ಉಳಿತಾಯಕ್ಕೆ ಇದು ಉತ್ತಮ ಆಯ್ಕೆಯಾಗಿದೆ’ ಎಂದು ಹೇಳಿದರು.

ಚಂದಾದಾರರ ಅಭಿಪ್ರಾಯ ಕ್ರೋಡೀಕರಣ: ‘ಸರ್ಕಾರವು ಚಂದಾದಾರರ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಮೂಲಕ ಎನ್‌ಪಿಎಸ್–ವಾತ್ಸಲ್ಯ ಯೋಜನೆಯ ಮತ್ತಷ್ಟು ಸುಧಾರಣೆಗೆ ಒತ್ತು ನೀಡಲಿದೆ’ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ನಾಗರಾಜು ಮದ್ದಿರಾಳ ತಿಳಿಸಿದ್ದಾರೆ.

ಖಾತೆ ತೆರೆಯುವುದು ಹೇಗೆ

ಪೋಷಕರು ಆನ್‌ಲೈನ್ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಮಕ್ಕಳಿಗೆ ಈ ಯೋಜನೆಯ ಖಾತೆ ತೆರೆಯಬಹುದಾಗಿದೆ. ಖಾತೆ ತೆರೆಯಲು ₹1 ಸಾವಿರ ನಿಗದಿಪಡಿಸಲಾಗಿದೆ. ಎಷ್ಟು ಹೂಡಿಕೆ ಪೋಷಕರು ಮಕ್ಕಳ ಖಾತೆಗೆ ವಾರ್ಷಿಕ ₹1 ಸಾವಿರ ಕೊಡುಗೆ ನೀಡಬಹುದಾಗಿದೆ. ಈ ಯೋಜನೆಯಡಿ ಹೂಡಿಕೆಯಾಗುವ ಹಣವನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಕೇಂದ್ರವು ಅಂತಿಮಗೊಳಿಸುತ್ತಿದೆ. ಯಾರು ಅರ್ಹ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎನ್‌ಪಿಎಸ್–ವಾತ್ಸಲ್ಯ ಖಾತೆ ತೆರೆಯಬಹುದಾಗಿದೆ. ಅವರಿಗೆ 18 ವರ್ಷ ಪೂರ್ಣಗೊಂಡ ಬಳಿಕೆ ಈ ಖಾತೆಯು ಎನ್‌ಪಿಎಸ್ ಸಾಮಾನ್ಯ ಖಾತೆಯಾಗಿ ಮಾರ್ಪಾಡು ಆಗಲಿದೆ. ಖಾತೆದಾರರು 60 ವರ್ಷ ಪೂರ್ಣಗೊಳಿಸಿದ ಬಳಿಕ ಪಿಂಚಣಿ ದೊರೆಯಲಿದೆ. ಎಷ್ಟು ಲಾಭ ಎನ್‌ಪಿಎಸ್‌ನ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್) ಶೇ 9.5ರಷ್ಟಿದೆ. ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆಯಾಗಿರುವ ಎನ್‌ಪಿಎಸ್ ಹಣಕ್ಕೆ ಶೇ 14ರಷ್ಟು ಲಾಭ ಸಿಕ್ಕಿದೆ. ಕಾರ್ಪೊರೇಟ್ ಬಾಂಡ್‌ನಲ್ಲಿನ ಹೂಡಿಕೆಗೆ ಶೇ 9.1ರಷ್ಟು ಹಾಗೂ ಸರ್ಕಾರಿ ಸಾಲಪತ್ರಗಳಲ್ಲಿನ ಹೂಡಿಕೆಗೆ ಶೇ 8.8ರಷ್ಟು ಲಾಭ ದೊರೆಕಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.