ನವದೆಹಲಿ: ಅಮೆಜಾನ್ ಕಂಪನಿಯು ಭಾರತದಲ್ಲಿನ ತನ್ನ ನೌಕರರಿಗೆ ಗರಿಷ್ಠ ₹ 6,300ರವರೆಗೆ ‘ವಿಶೇಷ ಮನ್ನಣೆಯ ಬೋನಸ್’ ನೀಡುವುದಾಗಿ ಸೋಮವಾರ ತಿಳಿಸಿದೆ. ಈ ಮಾದರಿಯ ಬೋನಸ್ಅನ್ನು ಕಂಪನಿಯು ಇತರ ದೇಶಗಳಲ್ಲೂ ತನ್ನ ನೌಕರರಿಗೆ ನೀಡುತ್ತಿದೆ.

#MakeAmazonPay (ಅಮೆಜಾನ್ ಬೆಲೆ ತೆರುವಂತೆ ಮಾಡಿ) ಎಂಬ ಹ್ಯಾಷ್ಟ್ಯಾಗ್ ಅಡಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅಭಿಯಾನದ ನಡುವೆಯೇ ಅಮೆಜಾನ್ ಈ ಘೋಷಣೆ ಮಾಡಿದೆ. ಅಮೆಜಾನ್ ಕಂಪನಿಯು ಭಾರಿ ಮೊತ್ತದ ಲಾಭ ಮಾಡಿಕೊಳ್ಳುತ್ತಿದೆ. ಆದರೆ, ಅಷ್ಟು ಲಾಭ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕಂಪನಿಯ ನೌಕರರು ಹಾಗೂ ಭೂಮಿಯ ಪರಿಸರವು ತೆರುತ್ತಿರುವ ಬೆಲೆ ಬಹಳ ದೊಡ್ಡದು ಎಂದು #MakeAmazonPay ಅಭಿಯಾನ ನಡೆಸುತ್ತಿರುವವರು ಆರೋಪಿಸಿದ್ದಾರೆ. ಈ ಆರೋಪವನ್ನು ಅಮೆಜಾನ್ ಅಲ್ಲಗಳೆದಿದೆ.

ಭಾರತದಲ್ಲಿ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಕಂಪನಿಯ ಪೂರ್ಣಾವಧಿ ನೌಕರರಾಗಿದ್ದವರಿಗೆ ₹ 6,300 ಹಾಗೂ ಅರೆಕಾಲಿಕ ನೌಕರರಾಗಿದ್ದವರಿಗೆ ₹ 3,150 ಬೋನಸ್ ನೀಡಲಾಗುತ್ತದೆ ಎಂದು ಅಮೆಜಾನ್ ಕಂಪನಿಯ ಹಿರಿಯ ಅಧಿಕಾರಿ ಡೇವ್ ಕ್ಲಾರ್ಕ್ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.