ನವದೆಹಲಿ (ಪಿಟಿಐ): ಭಾರತದಿಂದ ವಿದೇಶಗಳಿಗೆ ರಫ್ತು ಮಾಡುವ ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್ಕಾರಕ ಎಥಿಲೀನ್ ಆಕ್ಸೈಡ್ ಅಂಶವನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಮಸಾಲೆ ಮಂಡಳಿಯು ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ರಫ್ತು ಮಾಡುವ ಮಸಾಲೆ ಪದಾರ್ಥಗಳಿಗೆ ಕ್ರಿಮಿನಾಶಕ ಸಿಂಪಡಣೆ ಅಥವಾ ಧೂಮೀಕರಣದ ವೇಳೆ ಎಥಿಲೀನ್ ಆಕ್ಸೈಡ್ ಬಳಸದಂತೆ ಎಚ್ಚರಿಕೆವಹಿಸಬೇಕು. ಸಾಗಣೆದಾರರು ದಾಸ್ತಾನು, ಪ್ಯಾಕಿಂಗ್ ಸೇರಿ ಯಾವುದೇ ಹಂತದಲ್ಲಿ ಈ ಕೀಟನಾಶಕವನ್ನು ಬಳಸಬಾರದು ಎಂದು ಸೂಚನೆ ನೀಡಿದೆ.

ರಫ್ತುದಾರರು ಕಚ್ಚಾ ಸರಕು, ಅವುಗಳ ಸಂಸ್ಕರಣೆ ಮತ್ತು ಪ್ಯಾಕಿಂಗ್ ಹಂತದಲ್ಲಿ ಈ ಕೀಟನಾಶಕ ಅಂಶದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ಪರೀಕ್ಷೆಯ ವೇಳೆ ಈ ಕೀಟನಾಶಕ ಅಂಶ ಪತ್ತೆಯಾಗುವ ಪದಾರ್ಥಗಳನ್ನು ರವಾನಿಸಬಾರದು ಎಂದು ಹೇಳಿದೆ.

ಕೀಟಗಳ ಬಾಧೆ ತಡೆಗೆ ಸಂಬಂಧಿಸಿದಂತೆ ವಿಕಿರಣ ತಂತ್ರಜ್ಞಾನ ಸೇರಿದಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಸೂಚಿಸಿರುವ ವಿಧಾನಗಳನ್ನು ಅನುಸರಿಸಬೇಕು ಎಂದು ಸೂಚಿಸಿದೆ.

ಎಂಡಿಎಚ್ ಹಾಗೂ ಎವರೆಸ್ಟ್ ಕಂಪನಿಯ ಕೆಲವು ಮಸಾಲೆ ಪದಾರ್ಥಗಳಲ್ಲಿ ಕೀಟನಾಶಕ ಅಂಶವಿದೆ ಎಂಬ ಆರೋಪದ ಮೇಲೆ ಹಾಂಗ್ಕಾಂಗ್ ಹಾಗೂ ಸಿಂಗಪುರದಲ್ಲಿ ಇವುಗಳ ಮಾರಾಟ, ಬಳಕೆಗೆ ನಿಷೇಧ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.