ರಾಣಿಪೇಟೆ (ತಮಿಳುನಾಡು): ಪಾನಪಕ್ಕಂ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಟಾಟಾ ಮೋಟರ್ಸ್‌ನ ಕಾರು ತಯಾರಿಕಾ ಹೊಸ ಘಟಕಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಭೂಮಿಪೂಜೆ ನೆರವೇರಿಸಿದರು.

ಈ ಘಟಕಕ್ಕೆ ಕಂಪನಿಯು ₹9 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ.

ಟಾಟಾ ಮೋಟರ್ಸ್ ಮತ್ತು ಜಾಗ್ವರ್ ಲ್ಯಾಂಡ್ ರೋವರ್‌ನ ಹೊಸಪೀಳಿಗೆಯ ಕಾರುಗಳನ್ನು ಇಲ್ಲಿ ತಯಾರಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಘಟಕದಲ್ಲಿ ಹಂತ ಹಂತವಾಗಿ ಕಾರುಗಳ ತಯಾರಿಕಾ ಸಾಮರ್ಥ್ಯವನ್ನು ವಿಸ್ತರಿಸಲಾಗುವುದು. ಮುಂದಿನ ಐದು ಅಥವಾ ಏಳು ವರ್ಷದೊಳಗೆ ವಾರ್ಷಿಕ 2.50 ಲಕ್ಷ ಕಾರುಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ. ಇದರಿಂದ 5 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದೆ.

‘ದೇಶದಲ್ಲಿನ ದೊಡ್ಡ ಕಂಪನಿಗಳಿಗಷ್ಟೇ ತಮಿಳುನಾಡು ಬಂಡವಾಳ ಹೂಡಿಕೆಯ ತಾಣವಾಗಿಲ್ಲ. ಬಹುರಾಷ್ಟ್ರೀಯ ಕಂಪನಿಗಳಿಗೂ ಹೂಡಿಕೆಯ ವಾತಾವರಣ ಕಲ್ಪಿಸಿದೆ’ ಎಂದು ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.