ನವದೆಹಲಿ: ದೇಶದ ಸರಾಸರಿ ತೆರಿಗೆ ಸಂಗ್ರಹವು 2021–22ನೇ ಹಣಕಾಸು ವರ್ಷದ ಅಂತ್ಯಕ್ಕೆ ದಾಖಲೆಯ ₹ 27.07 ಲಕ್ಷ ಕೋಟಿಗಳಿಗೆ ತಲುಪಿದೆ ಎಂದು ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಶುಕ್ರವಾರ ತಿಳಿಸಿದ್ದಾರೆ. 2020–21ನೇ ಹಣಕಾಸು ವರ್ಷದಲ್ಲಿ ಸರಾಸರಿ ತೆರಿಗೆ ಸಂಗ್ರಹವು ₹ 20.27 ಲಕ್ಷ ಕೋಟಿಗಳಷ್ಟು ಆಗಿತ್ತು.

ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗಿರುವುದೇ ಈ ಪ್ರಮಾಣದಲ್ಲಿ ತೆರಿಗೆ ಸಂಗ್ರಹಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ವೈಯಕ್ತಿಕ ಮತ್ತು ಕಾರ್ಪೊರೇಟ್ ತೆರಿಗೆಗಳನ್ನು ಒಳಗೊಂಡ ನೇರ ತೆರಿಗೆ ಸಂಗ್ರಹವು ಹಿಂದಿನ ಹಣಕಾಸು ವರ್ಷದಲ್ಲಿ ₹ 14.01 ಲಕ್ಷ ಕೋಟಿಗಳಷ್ಟು ಆಗಿದೆ. ಇದು ಬಜೆಟ್ ಅಂದಾಜಿಗಿಂತಲೂ ₹ 3.02 ಲಕ್ಷ ಕೋಟಿ ಹೆಚ್ಚು. 2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 49ರಷ್ಟು ಏರಿಕೆ ಕಂಡುಬಂದಿದೆ.

ಪರೋಕ್ಷ ತೆರಿಗೆ ಸಂಗ್ರಹವು ₹12.90 ಲಕ್ಷ ಕೋಟಿಗಳಷ್ಟು ಆಗಿದೆ. ಇದು ಬಜೆಟ್ ಅಂದಾಜಿಗಿಂತಲೂ ₹1.88 ಲಕ್ಷ ಕೋಟಿ ಹೆಚ್ಚು. 2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 30ರಷ್ಟು ಏರಿಕೆ ಆಗಿದೆ.

ಶೀಘ್ರ ಎಲ್ಲಾ ಎಟಿಎಂಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವ ಸೌಲಭ್ಯ: ಆರ್ಬಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.