ಮುಂಬೈ: ಆರ್‌ಆರ್‌ಪಿ ಎಲೆಕ್ಟ್ರಾನಿಕ್ಸ್ ಕಂಪನಿಯು ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೆಮಿಕಂಡಕ್ಟರ್ ತಯಾರಿಕಾ ಘಟಕದಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪಾಲುದಾರರಾಗಲಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ₹ 5 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು ಎಂದಿರುವ ಕಂಪನಿಯು, ಇತರ ಪಾಲುದಾರರ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದೆ.

ಸಚಿನ್ ಉಪಸ್ಥಿತಿಯಲ್ಲಿ ಉಪನಗರ ನವಿ ಮುಂಬೈನಲ್ಲಿರುವ 25 ಸಾವಿರ ಚದರಡಿ ವಿಸ್ತೀರ್ಣದ ಕಂಪನಿಯ ಜಾಗದಲ್ಲಿ ಈ ಘೋಷಣೆ ಹೊರಬಿದ್ದಿದೆ. ಇವರೊಂದಿಗೆ ಕಂಪನಿಯ ಸಂಸ್ಥಾಪಕರಾಗಿರುವ ನಿವೃತ್ತ ಪರಮಾಣು ಭೌತವಿಜ್ಞಾನಿ ಅನಿಲ್ ಕಾಕೋಡ್ಕರ್, ಅಧ್ಯಕ್ಷ ಹಾಗೂ ಸಿಇಒ ರಾಜೇಂದ್ರ ಚೋಡಂಕರ್ ಇದ್ದರು.

ಇದೊಂದು ಹೊರಗುತ್ತಿಗೆ ಆಧಾರದ ಜೋಡಣೆ ಮತ್ತು ಪರೀಕ್ಷಾ ಸೌಲಭ್ಯ ಕಂಪನಿಯಾಗಿದ್ದು, ಮುಂದಿನ ದಿನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನಾಗಿಯೂ ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಆರ್‌ಆರ್‌ಪಿ ಹೇಳಿದೆ.

‘ಸರ್ಕಾರದ ಸಬ್ಸಿಡಿ ಯೋಜನೆಗಳನ್ನೂ ಯೋಜನಾಬದ್ಧವಾಗಿ ಬಳಸಿಕೊಳ್ಳಲಾಗುವುದು. ಆಟೊಮೊಬೈಲ್, ಇಂಧನ, ಎಲೆಕ್ಟ್ರಾನಿಕ್ಸ್ ಹಾಗೂ ಕೈಗಾರಿಕೆಗಳಲ್ಲಿ ಬಳಸುವ ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಕಂಪನಿಯು ಕೆಲಸ ಮಾಡಲಿದೆ’ ಎಂದಿದೆ.

‘ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಒಂದು ಅತ್ಯುತ್ತಮ ಕಂಪನಿಗಳಲ್ಲಿ ಆರ್‌ಆರ್‌ಪಿ ಒಂದಾಗಲಿದೆ. ಅದರಲ್ಲೂ ತೆಂಡೂಲ್ಕರ್ ಅಂಥವರು ಯೋಜನಾಬದ್ಧ ಪಾಲುದಾರರಾಗಿರುವುದರಿಂದ ಇದು ಇನ್ನಷ್ಟು ಎತ್ತರಕ್ಕೆ ಏರಲಿದೆ’ ಎಂದು ಚೋದನಂಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.