ಮುಂಬೈ: ರಫ್ತು ವಹಿವಾಟು ಮಂದಗತಿಯಲ್ಲಿ ಇರುವುದರಿಂದ ದೇಶದಲ್ಲಿ ಜವಳಿ ಉದ್ಯಮವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಜವಳಿ ಗಿರಣಿಗಳ ಸಂಘ ಹೇಳಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ, ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧವು ಹತ್ತಿ ಆಧಾರಿತ ತಯಾರಿಕಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ರಫ್ತು ಮಂದಗತಿಯಲ್ಲಿ ಸಾಗಲು ಇದೇ ಕಾರಣ. ಕೂಡಲೇ, ಕೇಂದ್ರ ಸರ್ಕಾರವು ಆರ್ಥಿಕ ನೆರವು ಘೋಷಿಸಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಘವು ಒತ್ತಾಯಿಸಿದೆ.

ಅಲ್ಲದೇ, ಹತ್ತಿ ಆಮದಿನ ಮೇಲೆ ಶೇ 11ರಷ್ಟು ಸುಂಕ ವಿಧಿಸಲಾಗುತ್ತಿದೆ.
ಕೈಯಿಂದ ತೆಗೆದ ಹತ್ತಿ ನೂಲಿನ ಗುಣಮಟ್ಟ ಕಾಯ್ದುಕೊಳ್ಳುವಂತೆ
ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ ಎಂದು ಹೇಳಿದೆ.

ಸರ್ಕಾರದ ಈ ಆದೇಶ ಹಾಗೂ ಜಾಗತಿಕ ವಿದ್ಯಮಾನಗಳಿಂದ ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ. ಪ್ರತಿದಿನ ಬಳಸುವ ವಿದ್ಯುತ್ ಶುಲ್ಕವನ್ನೂ ಪಾವತಿಸಲು ಆಗುತ್ತಿಲ್ಲ. ಜತೆಗೆ, ಸಾಲದ ಅಸಲು ಹಾಗೂ ಬಡ್ಡಿದರ ಪಾವತಿಸಲೂ ಅವುಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.

ಬೇಡಿಕೆ ಏನು?: ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಜವಳಿ ಉದ್ಯಮದ ನೆರವಿಗೆ ಸರ್ಕಾರ ಬರಬೇಕು. ಹಣಕಾಸಿನ ನೆರವಿನ ಕ್ರಮಗಳನ್ನು ವಿಸ್ತರಿಸುವಂತೆ ಎಲ್ಲಾ ಬ್ಯಾಂಕ್ಗಳಿಗೆ ಸೂಚಿಸಬೇಕು. ಸಾಲದ ಮೇಲಿನ ಅಸಲು ಮರುಪಾವತಿಸುವ ಅವಧಿಯನ್ನು ಒಂದು ವರ್ಷ ವಿಸ್ತರಿಸಬೇಕು ಎಂದು ಒತ್ತಾಯಿಸಿದೆ.

ತುರ್ತು ಸಾಲ ಖಾತರಿ ಯೋಜನೆಯಡಿ (ಇಸಿಎಲ್ಜಿಎಸ್) ಮೂರು ವರ್ಷದವರೆಗೆ ನೀಡಿರುವ ಸಾಲದ ಅವಧಿಯನ್ನು ಆರು ವರ್ಷಗಳಿಗೆ ವಿಸ್ತರಿಸಬೇಕು. ತೊಂದರೆಗೆ ಸಿಲುಕಿರುವ ಗಿರಣಿಗಳಿಗೆ ಆರ್ಥಿಕ ನೆರವಿನ ಸೌಲಭ್ಯವನ್ನು ನೀಡಬೇಕು ಎಂದು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.