ವಾಷಿಂಗ್ಟನ್: ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಸಂಸ್ಥೆಯು (ಯುಎಸ್‌ಟಿಆರ್) ಗುರುವಾರ ಬಿಡುಗಡೆಗೊಳಿಸಿರುವ ವಿಶ್ವದ ‘ಕುಖ್ಯಾತ ಮಾರುಕಟ್ಟೆ’ಗಳ ವಾರ್ಷಿಕ ಪಟ್ಟಿಯಲ್ಲಿ ಬೆಂಗಳೂರಿನ ಎಸ್.ಪಿ ರಸ್ತೆ ಮಾರುಕಟ್ಟೆಯ ಹೆಸರು (ಸದರ್ ಪತ್ರಪ್ಪ ರಸ್ತೆ) ಉಲ್ಲೇಖವಾಗಿದೆ.

ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯು 2023ರಲ್ಲಿನ ವಿಶ್ವದ ಕುಖ್ಯಾತ 39 ಆನ್‌ಲೈನ್ ಮಾರ್ಕೆಟ್ ಮತ್ತು 33 ಭೌತಿಕ ಮಾರುಕಟ್ಟೆಗಳ ಪಟ್ಟಿ ಪ್ರಕಟಿಸಿದೆ. ಈ ಮಾರುಕಟ್ಟೆಗಳು ನಕಲಿ ಟ್ರೇಡ್‌ಮಾರ್ಕ್ ಸೃಷ್ಟಿ ಅಥವಾ ಹಕ್ಕುಸ್ವಾಮ್ಯ ಚೌರ್ಯದಲ್ಲಿ ತೊಡಗಿವೆ ಎಂದು ಹೇಳಿದೆ.

ಮುಂಬೈನ ಹೀರಾ ಪನ್ನಾ ಮತ್ತು ನವದೆಹಲಿಯ ಪ್ರಸಿದ್ಧ ಕರೋಲ್ ಬಾಗ್ ಮಾರುಕಟ್ಟೆಗಳು ಈ ಪಟ್ಟಿಯಲ್ಲಿವೆ. ದೇಶದ ಜನಪ್ರಿಯ ಇ–ಕಾರ್ಮಸ್ ಉದ್ಯಮ ಇಂಡಿಯಾ ಮಾರ್ಟ್, ವೆಗಾಮೂವೀಸ್, ಡಬ್ಲ್ಯುಎಚ್‌ಎಂಸಿಎಸ್ ಸ್ಟಾಟರ್ಸ್ ಕೂಡ ಪಟ್ಟಿಯಲ್ಲಿವೆ.

‘ಈ ಮಾರುಕಟ್ಟೆಗಳಲ್ಲಿ ನಕಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಜನರಿಂದ ದೋಚಿದ ಸರಕುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಕಾರ್ಮಿಕರು, ಗ್ರಾಹಕರು ಮತ್ತು ಸಣ್ಣ ವ್ಯಾಪಾರಕ್ಕೆ ಹಾನಿಯಾಗುತ್ತಿದೆ. ಅಮೆರಿಕದ ಆರ್ಥಿಕತೆಗೂ ಇಂತಹ ಮಾರುಕಟ್ಟೆಗಳು ಅಪಾಯ ತಂದೊಡುತ್ತಿವೆ’ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಕಳವಳ ವ್ಯಕ್ತಪಡಿಸಿದ್ದಾರೆ.

ಚೀನಾ ಮೂಲದ ಇ–ಕಾರ್ಮಸ್ ಮತ್ತು ವಾಣಿಜ್ಯ ಮಾರುಕಟ್ಟೆಯಾದ ಟಾವೊಬಾವೊ, ವಿಚಾಟ್, ಡಿಎಚ್‌ಗೇಟ್, ಪಿಂಡೂಡುವೋ ಈ ಪಟ್ಟಿಯಲ್ಲಿವೆ. ಚೀನಾ ಕುಖ್ಯಾತ ಮಾರುಕಟ್ಟೆಗಳನ್ನು ಹೊಂದಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.