ಆರ್ಥಿಕ ಸಮೀಕ್ಷೆ ಹೇಳಿದ್ದೇನು?
ಆಟಿಕೆಗಳ ಆಮದಿಗೆ ಸಂಬಂಧಿಸಿದಂತೆ ಚೀನಾದ ಮೇಲಿನ ಅತಿಯಾದ ಅವಲಂಬನೆ ತಪ್ಪಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಇತ್ತೀಚೆಗೆ ಸಂಸತ್‌ನಲ್ಲಿ ಮಂಡಿಸಿರುವ ಆರ್ಥಿಕ ಸಮೀಕ್ಷಾ ವರದಿ ಹೇಳಿದೆ. ಭಾರತವನ್ನು ಆಟಿಕೆಗಳ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿಗೆ ತರಲು ಅಗತ್ಯ ಕ್ರಮವಹಿಸಲಾಗಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಚೀನಾದಿಂದ ಆಮದು ಪ್ರಮಾಣವು ಶೇ 76ರಷ್ಟು ಕಡಿಮೆಯಾಗಿದೆ ಎಂದು ವಿವರಿಸಿದೆ. 2012–13ರಲ್ಲಿ ಚೀನಾದಿಂದ ₹1800 ಕೋಟಿ ಮೌಲ್ಯದ ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. 2023–24ರಲ್ಲಿ ₹350 ಕೋಟಿಗೆ ತಗ್ಗಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಸ್ಪರ್ಧಾತ್ಮಕತೆಯ ಸೂಚಕವಾಗಿದೆ ಎಂದು ಹೇಳಿದೆ.