ನವದೆಹಲಿ: ಮುಂಬೈ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳಲ್ಲಿ (ಎನ್‌ಎಸ್‌ಇ) ಏಪ್ರಿಲ್ 26ರಿಂದ ತನ್ನ ಷೇರುಗಳ ವಹಿವಾಟು ಪುನರಾರಂಭ ಆಗಲಿದೆ ಎಂದು ನಷ್ಟದಲ್ಲಿರುವ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ಶನಿವಾರ ತಿಳಿಸಿದೆ.

ಸಿಡಿಇಎಲ್‌ನ ಷೇರುಗಳನ್ನು ವಹಿವಾಟು ನಡೆಸುವುದರಿಂದ ಅಮಾನತು ಮಾಡಿದ್ದ ಆದೇಶವನ್ನು ರದ್ದುಮಾಡುವ ಕುರಿತು ಎನ್‌ಎಸ್‌ಇ ಮತ್ತು ಬಿಎಸ್‌ಇ ಶುಕ್ರವಾರ ಬರೆದಿರುವ ಪತ್ರದಲ್ಲಿ ತಿಳಿಸಿವೆ ಎಂದು ಬಿಎಸ್‌ಇಗೆ ಮಾಹಿತಿ ನೀಡಿದೆ.

2019ರ ಜೂನ್ ಮತ್ತು ಸೆಪ್ಟೆಂಬರ್ ತ್ರೈಮಾಸಿಕಗಳ ಹಣಕಾಸು ವರದಿಗಳನ್ನು ಸಲ್ಲಿಸದೇ ಇರುವ ಕಾರಣಕ್ಕಾಗಿ ಷೇರುಪೇಟೆಗಳು ಸಿಡಿಇಎಲ್‌ನ ಷೇರು ವಹಿವಾಟನ್ನು ಅಮಾನತಿನಲ್ಲಿ ಇಟ್ಟಿದ್ದವು. ಕಂಪನಿಯ ಸಾಲ ₹ 280 ಕೋಟಿಗಳಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.