ನವದೆಹಲಿ: ಆರ್ಥಿಕ ಚಿಂತಕರ ಚಾವಡಿಯಾಗಿರುವ ಸಾರ್ವಜನಿಕ ಹಣಕಾಸು ಮತ್ತು ನೀತಿಯ ರಾಷ್ಟ್ರೀಯ ಸಂಸ್ಥೆಯ (ಎನ್ಐಪಿಎಫ್ಪಿ) ಅಧ್ಯಕ್ಷರಾಗಿ ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರು ಇದೇ 22ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ವಿಜಯ್ ಕೇಳ್ಕರ್ ಅವರು 2014ರಿಂದ ಈ ಹುದ್ದೆಯಲ್ಲಿದ್ದರು. ಪಟೇಲ್ ಅವರ ಅಧಿಕಾರಾವಧಿ ನಾಲ್ಕು ವರ್ಷಗಳವರೆಗೆ ಇರಲಿದೆ.

ಉರ್ಜಿತ್ ಪಟೇಲ್ ಅವರು ಆರ್ಬಿಐ ಗವರ್ನರ್ ಹುದ್ದೆಯ ತಮ್ಮ ಅಧಿಕಾರಾವಧಿಯು ಇನ್ನೂ ಕೆಲ ತಿಂಗಳುಗಳವರೆಗೆ ಇರುವಾಗಲೇ 2018ರ ಡಿಸೆಂಬರ್ 10ರಂದು ರಾಜೀನಾಮೆ ಸಲ್ಲಿಸಿದ್ದರು. ವೈಯಕ್ತಿಕ ಕಾರಣಗಳಿಗಾಗಿ ಹುದ್ದೆ ತೊರೆಯುತ್ತಿರುವುದಾಗಿ ಕಾರಣ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.