ನವದೆಹಲಿ: ‘ಅಮೆರಿಕಕ್ಕೆ ರಫ್ತು ಮಾಡಿದ ಇಂಧನವನ್ನು ರಷ್ಯಾದ ಕಚ್ಚಾ ತೈಲದಿಂದ ತಯಾರಿಸಿದ್ದು ಎನ್ನುವುದನ್ನು ಭಾರತ ಮುಚ್ಚಿಟ್ಟಿದೆ. ಇದು ಅಮೆರಿಕವು ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧದ ಉಲ್ಲಂಘನೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ’ ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ಮೈಕೆಲ್ ಪಾತ್ರಾ ಶನಿವಾರ ಹೇಳಿದ್ದಾರೆ.

‘ಭಾರತದ ಹಡಗೊಂದು ಸಮುದ್ರದಲ್ಲಿಯೇ ರಷ್ಯಾದ ಟ್ಯಾಂಕರ್ನಿಂದ ಕಚ್ಚಾ ತೈಲವನ್ನು ಪಡೆದುಕೊಂಡಿತು. ನಂತರ ಅದನ್ನು ಗುಜರಾತ್ನ ಬಂದರಿಗೆ ತಂದು ಅಲ್ಲಿ ಸಂಸ್ಕರಣೆ ಮಾಡಿ ರಫ್ತು ಮಾಡಲಾಯಿತು’ ಎಂದು ಅಮೆರಿಕದ ಹಣಕಾಸು ಇಲಾಖೆಯು ಹೇಳಿದೆ ಎಂದು ಅವರು ತಿಳಿಸಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸಂಸ್ಕರಿಸಿದ ಇಂಧನವನ್ನು ತುಂಬಿಕೊಂಡ ಹಡಗು ನಿರ್ದಿಷ್ಟ ಗಮ್ಯಸ್ಥಾನದ ಗುರಿ ಇಲ್ಲದೇ ಬಂದರಿನಿಂದ ಹೊರಟಿತು. ಸಮುದ್ರದಲ್ಲಿ ಇದ್ದಾಗ ಇಂಧನಕ್ಕೆ ಎಲ್ಲಿಂದ ಬೇಡಿಕೆ ಬಂದಿದೆ ಎಂಬ ಮಾಹಿತಿ ಸಿಕ್ಕಿತು. ಹೀಗಾಗಿ ಅದು ನ್ಯೂಯಾರ್ಕ್ ತಲುಪಿತು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಕುರಿತು ತಕ್ಷಣದ ಪ್ರತಿಕ್ರಿಯೆ ನೀಡಲು ದೆಹಲಿಯಲ್ಲಿನ ಅಮೆರಿಕದ ರಾಯಭಾರಿ ಕಚೇರಿ ನಿರಾಕರಿಸಿದೆ. ರಷ್ಯಾ ದೇಶವು ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬಳಿಕ ರಷ್ಯಾದ ಕಚ್ಚಾ ತೈಲ, ಸಂಸ್ಕರಿಸಿದ ಇಂಧನ, ತೈಲ ಮತ್ತು ಅನಿಲ ಸೇರಿದಂತೆ ಹಲವು ಉತ್ಪನ್ನಗಳ ಆಮದು ಮೇಲೆ ಅಮೆರಿಕವು ನಿರ್ಬಂಧ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.