ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ತನ್ನ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ವಹಿವಾಟಿನ ಶೇ 20ರಷ್ಟು ಷೇರುಗಳನ್ನು ಸೌದಿ ಆರಾಮ್ಕೊ ಕಂಪನಿಗೆ ಮಾರಾಟ ಮಾಡುವ ಪ್ರಸ್ತಾವವನ್ನು ಕೈಬಿಟ್ಟಿದೆ.

ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಸೌದಿ ಆರಾಮ್ಕೊ ಕಂಪನಿಗೆ ₹ 1.11 ಲಕ್ಷ ಕೋಟಿ ಮೊತ್ತಕ್ಕೆ ಶೇ 20ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಸ್ತಾವದ ಮರು ಮೌಲ್ಯಮಾಪನ ಮಾಡುವುದರಿಂದ ಎರಡೂ ಕಂಪನಿಗಳಿಗೂ ಅನುಕೂಲ ಆಗಲಿದೆ ಎಂದು ರಿಲಯನ್ಸ್ ಹೇಳಿದೆ. ಭಾರತದ ಖಾಸಗಿ ವಲಯದಲ್ಲಿ ಹೂಡಿಕೆ ಮಾಡುವ ಸೌದಿ ಆರಾಮ್ಕೊದ ‘ಆದ್ಯತಾ ಪಾಲುದಾರ’ ಕಂಪನಿ ಆಗಿರಲಿದೆ ಎಂದೂ ಅದು ತಿಳಿಸಿದೆ.

ಅಂಬಾನಿ ಅವರು 2019ರ ಆಗಸ್ಟ್‌ನಲ್ಲಿ ನಡೆದಿದ್ದ ಷೇರುದಾರರ ವಾರ್ಷಿಕ ಸಭೆಯಲ್ಲಿ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ವಹಿವಾಟಿನ ಶೇ 20ರಷ್ಟು ಷೇರುಗಳನ್ನು ಸೌದಿ ಆರಾಮ್ಕೊ ಕಂಪನಿಗೆ ಮಾರಾಟ ಮಾಡುವುದಾಗಿ ಘೋಷಿಸಿದ್ದರು. ಒಪ್ಪಂದವು 2020ರ ಮಾರ್ಚ್ ವೇಳಗೆ ಮುಕ್ತಾಯ ಆಗಲಿದೆ ಎಂದೂ ಹೇಳಿದ್ದರು. ಆದರೆ, ಕೋವಿಡ್ ನಿಯಂತ್ರಿಸಲು ಹೇರಿದ್ದ ನಿರ್ಬಂಧಗಳಿಂದಾಗಿ ನಿಗದಿತ ಅವಧಿಯೊಳಗೆ ಒಪ್ಪಂದ ಏರ್ಪಡಲಿಲ್ಲ ಎಂದು ಕಂಪನಿಯು ತಿಳಿಸಿದೆ.

ಆ ಬಳಿಕ ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದ ಪೂರ್ಣಗೊಳ್ಳಲಿದೆ ಎಂದು ಕಂಪನಿಯು ತನ್ನ ವಾರ್ಷಿಕ ಸಭೆಯಲ್ಲಿ ತಿಳಿಸಿತ್ತು. ಆದರೆ ಇದೀಗ ಮರು ಮೌಲ್ಯಮಾಪನ ಮಾಡುವುದಾಗಿ ಹೇಳಿದೆ. ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ವಹಿವಾಟನ್ನು ಕಂಪನಿಯಿಂದ ಪ್ರತ್ಯೇಕಗೊಳಿಸುವ ಬಗ್ಗೆ ರಾಷ್ಟ್ರಿಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಹ ಕೈಬಿಡಲು ರಿಲಯನ್ಸ್ ನಿರ್ಧರಿಸಿದೆ.

ಈ ಬೆಳವಣಿಗೆಗೆಳ ಕುರಿತು ಕಂಪನಿಯ ವಕ್ತಾರರಿಗೆ ಕಳುಹಿಸಿದ ಇ–ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.